(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ. 20. ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸುಮಾರು ಒಂದು ತಾಸಿಗಿಂತಲೂ ಅಧಿಕ ಸಂಚಾರಕ್ಕೆ ಅಡಚಣೆಯಾದ ಘಟನೆ ಪಾಣೆಮಂಗಳೂರು ಸೇತುವೆಯಲ್ಲಿ ನಡೆದಿದೆ.
ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿದ್ದಲ್ಲದೇ, ಇದರ ಹಿಂಬದಿಯಿಂದ ಬಂದ ಎರಡು ವಾಹನಗಳು ಮತ್ತೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಎರಡು ಕಾರುಗಳು ಜಖಂಗೊಂಡಿದೆ. ಅದೃಷ್ಟವಶಾತ್ ಪ್ರಯಾಣಿಕರಿಗೆ ಅಪಾಯದಿಂದ ಪಾರಾಗಿದ್ದಾರೆ. ಇದರ ಜೊತೆಗೆ ಸೇತುವೆ ಸಮೀಪ ನೆಹರು ನಗರ ಎಂಬಲ್ಲಿ ಲಾರಿಯೊಂದರ ಕೆಟ್ಟು ನಿಂತಿತ್ತು. ಹೀಗಾಗಿ ತಾಸುಗಟ್ಟಲೆ ವಾಹನಗಳು ಸಾಲಾಗಿ ನಿಂತಿದ್ದವು. ಸೇತುವೆಯಲ್ಲಿ ಅಪಘಾತ ಸಂಭವಿಸಿದ ಪರಿಣಾಮ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.
Also Read ವಿಶೇಷ ಚೇತನ ಮಗುವಿನ ಚಿಕಿತ್ಸೆಗೆ ಕೈ ಚೆಲ್ಲಿದ ಖಾಸಗಿ ಆಸ್ಪತ್ರೆ ➤ ಮರು ಜೀವ ನೀಡಿದ ವೆನ್ಲಾಕ್ ವೈದ್ಯರ ತಂಡ