ಸಿಲಿಂಡರ್ ಸ್ಫೋಟ- 8 ಮನೆಗಳಿಗೆ ಹಾನಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.19. ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 8 ಮನೆಗಳು ಹಾನಿಯಾಗಿರುವ ಘಟನೆ ಚಾಮರಾಜಪೇಟೆಯ ಅನಂತಪುರದ ಬಳಿ ನಡೆದಿದೆ.

ಸಿಲಿಂಡರ್‌ ಸ್ಫೋಟದ ತೀವ್ರತೆಗೆ 8 ಶೀಟ್ ಮನೆಗಳು ಹಾನಿಗೊಳಗಾಗಿದ್ದು, ಈ ವೇಳೆ ಒಬ್ಬರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

error: Content is protected !!

Join the Group

Join WhatsApp Group