ಗಣೇಶ ಚತುರ್ಥಿ- ಪೊಲೀಸರಿಂದ ಪಥ ಸಂಚಲನ

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 19. ಗಣೇಶ ಚತುರ್ಥಿ ಪ್ರಯುಕ್ತ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಉಡುಪಿ ಪೊಲೀಸರಿಂದ ಪಥ ಸಂಚಲನವು ಉಡುಪಿ ನಗರದಲ್ಲಿ ನಡೆಯಿತು.

ಉಡುಪಿ ಉಪವಿಭಾಗದ ಡಿವೈಎಸ್ಪಿ ದಿನಕರ್ ಪಿ.ಕೆ. ನೇತೃತ್ವದಲ್ಲಿ ಉಡುಪಿ ನಗರ, ಮಲ್ಪೆ ಪೊಲೀಸ್ ಠಾಣಾ ಸಿಬ್ಬಂದಿ, ಕೆಎಸ್ಆರ್ಟಿಸಿ ತುಕುಡಿ ಸೇರಿದಂತೆ ಒಟ್ಟು ನೂರಕ್ಕೂ ಅಧಿಕ ಪೊಲೀಸರು  ಪಥಸಂಚನಲದಲ್ಲಿ ಪಾಲ್ಗೊಂಡಿದ್ದರು. ನಗರದ ಬನ್ನಂಜೆಯಿಂದ ಆರಂಭಗೊಂಡ ಪಥಸಂಚಲನವು ಸಿಟಿ ಬಸ್ ನಿಲ್ದಾಣ, ಸರ್ವಿಸ್ ಬಸ್ ನಿಲ್ದಾಣ ಮಾರ್ಗವಾಗಿ ಕೆ.ಎಮ್ ಮಾರ್ಗದಲ್ಲಿ ಸಾಗಿ ಮದರ್ ಆಫ್ ಸೋರ್ಸ್ ಚರ್ಚಿನ ಎದುರುಗಡೆ ಸಮಾಪ್ತಿಗೊಂಡಿತು.

Also Read  ಬಂಟ್ವಾಳ ಬಾರ್ ನಲ್ಲಿ ಚೂರಿ ಇರಿತ ➤ ಇಬ್ಬರಿಗೆ ಗಾಯ..!

error: Content is protected !!
Scroll to Top