ಇಂದಿನಿಂದ ಹೊಸ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನ ಆರಂಭ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 19. 5 ದಿನಗಳ ಕಾಲ ನಡೆಯಲಿರುವ ಸಂಸತ್ ನ ವಿಶೇಷ ಅಧಿವೇಶನ ಸೆ. 18ರಿಂದ ಆರಂಭಗೊಂಡಿದೆ. ಸಂಸತ್‌ನ, ಮೊದಲ ದಿನವಾದ ನಿನ್ನೆ (ಸೋಮವಾರ) ಹಳೇ ಸಂಸತ್​​​​ ಭವನದಲ್ಲಿ ಅಧಿವೇಶನ ಆರಂಭಗೊಂಡು, ಇಂದು ಹೊಸ ಸಂಸತ್ ಭವನಕ್ಕೆ ವರ್ಗಾವಣೆಯಾಗಿ ಅಧಿಕೃತ ಕಲಾಪ ಆರಂಭವಾಗಲಿದೆ.

 

ಇಂದು ಪ್ರಧಾನಿ ಮೋದಿ ಕಾಲ್ನಡಿಗೆಯಲ್ಲಿ ಸಂವಿಧಾನದ ಪ್ರತಿಯೊಂದಿಗೆ ಹೊಸ ಸಂಸತ್​​ಗೆ​ ಆಗಮಿಸಲಿದ್ದಾರೆ. ಹೊಸ ಸಂಸತ್ ಭವನದಲ್ಲಿ ಇಂದು ಮಧ್ಯಾಹ್ನ ಕಲಾಪ ಆರಂಭವಾಗಲಿದ್ದು, ಲೋಕಸಭೆಯಲ್ಲಿ ಮಧ್ಯಾಹ್ನ 1.15ಕ್ಕೆ ವಿಶೇಷ ಅಧಿವೇಶನ ಕಲಾಪ ಆರಂಭಗೊಂಡು, ರಾಜ್ಯಸಭೆಯಲ್ಲಿ ಮಧ್ಯಾಹ್ನ 2:15ಕ್ಕೆ ಕಲಾಪ ಆರಂಭವಾಗಲಿದೆ.

Also Read  ➤ ವಾಯುಪಡೆ ಅಧಿಕಾರಿ ಪುತ್ರನ ಕಾರು ಡಿಕ್ಕಿ ಹೊಡೆದು 3 ವರ್ಷದ ಮಗು ಮೃತ್ಯು..!

error: Content is protected !!
Scroll to Top