(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 18. ಜಿಲ್ಲೆಯಲ್ಲಿನ ಅಂಗನವಾಡಿ ಮೇಲ್ವಿಚಾರಕರು ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ನಿಷೇಧ ಕಾಯ್ದೆ-1994 ಹಾಗೂ ಎಂ.ಪಿ.ಟಿ ಆ್ಯಕ್ಟ್ ಬಗ್ಗೆ ಸೆ. 20ರ ಬೆಳಿಗ್ಗೆ 9.30ರಿಂದ ಜಿಲ್ಲಾ ಆಸ್ಪತ್ರೆ ಸಮೀಪವಿರುವ ಇನ್ಫೋಸಿಸ್ ಕಟ್ಟಡದ ಮಕ್ಕಳ ವಿಭಾಗದ 3ನೇ ಮಹಡಿಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭ್ರೂಣ ಲಿಂಗ ನಿಷೇಧ ಕಾಯ್ದೆ-1994 ಕುರಿತು ಸೆ. 20ರಂದು ಕಾರ್ಯಗಾರ
