ಹಬ್ಬದ ದಿನದಂದೇ ಜೂನಿಯರ್ ಪ್ರಿನ್ಸ್ ನ ಬರಮಾಡಿಕೊಂಡ ಧ್ರುವ ಸರ್ಜಾ ದಂಪತಿ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 18. ಆಕ್ಷನ್ ಪ್ರಿನ್ಸ್ ಎಂದು ಖ್ಯಾತರಾಗಿರುವ ನಟ ಧ್ರುವ ಸರ್ಜಾರ ಪತ್ನಿ ಪ್ರೇರಣಾ ಗಂಡು ಮಗುವಿಗೆ ಗೌರಿ ಗಣೇಶ ಹಬ್ಬದ ಶುಭದಿನದಂದೇ ಬೆಂಗಳೂರಿನ ಬಸವನಗುಡಿಯ ಖಾಸಗಿ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.

ಇತ್ತೀಚೆಗಷ್ಟೇ ಪತ್ನಿ ಪ್ರೇರಣಾ ಅವರ ಸೀಮಂತ ಕಾರ್ಯಕ್ರಮವನ್ನು ಧ್ರುವ ಸರ್ಜಾ, ಅಣ್ಣ ಚಿರು ಸರ್ಜಾ ಸಮಾಧಿಯಿರುವ ಫಾರ್ಮ್ ಹೌಸ್ ನಲ್ಲಿ ಅದ್ಧೂರಿಯಾಗಿ ನೆರವೇರಿಸಿದ್ದರು. ಧ್ರುವ ಸರ್ಜಾ ಹಾಗೂ ಪ್ರೇರಣಾ 2019ರಲ್ಲಿ ಮದುವೆ ಆಗಿದ್ದು, ಕಳೆದ ವರ್ಷ ಅಕ್ಟೋಬರ್​ 2ರಂದು ಧ್ರುವ ಸರ್ಜಾಗೆ ಹೆಣ್ಣು ಮಗು ಜನಿಸಿತು. ಇದೀಗ ಮತ್ತೊಮ್ಮೆ ತಂದೆ ಆಗಿರುವ ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Also Read  ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮುಂದುವರೆದ ಮಳೆಯ ಅಬ್ಬರ ➤ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತ

error: Content is protected !!
Scroll to Top