ರಜೆಯ ದಿನದಂದು ಕರ್ತವ್ಯ ನಿರ್ವಹಿಸಿದ ನೌಕರರಿಗೆ ಹೆಚ್ಚುವರಿ ವೇತನ- ಕೆಎಸ್ಸಾರ್ಟಿಸಿ ಆದೇಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 18. ರಜಾ ದಿನದಂದು ಕರ್ತವ್ಯ ನಿರ್ವಹಿಸಿದ ಕೆಎಸ್ ಆರ್ ಟಿಸಿ ಸಿಬ್ಬಂದಿಗಳಿಗೆ ಹೆಚ್ಚುವರಿ ವೇತನ ಪಾವತಿ ಮಾಡುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸೂಚಿಸಿದೆ.

 

ಕೊರೋ‌ನಾ ಸಾಂಕ್ರಾಮಿಕ ರೋಗದಿಂದ ನಿಗಮದ ಸಾರಿಗೆ ಆದಾಯ ಕುಂಠಿತವಾಗಿದ್ದ ಹಿನ್ನೆಲೆ ರಜಾ ದಿನಗಳಂದು ಕರ್ತವ್ಯ ನಿರ್ವಹಿಸಿದ್ದ ನೌಕರರಿಗೆ ಹೆಚ್ಚುವರಿ ವೇತನದ ಬದಲಾಗಿ ಪರಿಹಾರ ರಜೆ ನೀಡಲು ಉಲ್ಲೇಖ ಪತ್ರ-1 ರಂತೆ ನಿರ್ದೇಶನಗಳನ್ನು ನೀಡಲಾಗಿತ್ತು. ನಂತರ ಜನಸಂದಣಿ ಹೆಚ್ಚಿರುವ ಸಂದರ್ಭದಲ್ಲಿ ವಾಹನಗಳ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಡಿಸೆಂಬರ್-2022 ರಿಂದ ಜೂನ್-2023ರ ವರೆಗೆ ಮಾತ್ರ ಸವೇಚನ ರಜೆ ಸೌಲಭ್ಯವನ್ನು ವಿಸ್ತರಿಸಲಾಗಿತ್ತು.

Also Read  ಅನಂತ್ ಕುಮಾರ್ ಹೆಗ್ಡೆ ನಾಲಿಗೆ ಕಡಿದು ತಂದವರಿಗೆ 1 ಕೋಟಿ ಬಹುಮಾನ ► ಮಾಜಿ ಜಿ.ಪಂ. ಸದಸ್ಯನಿಂದ ವಿವಾದಾತ್ಮಕ ಘೋಷಣೆ

ಸದ್ಯ ಇದೀಗ ಶಕ್ತಿ ಯೋಜನೆಯ ಹಿನ್ನೆಲೆ ಪ್ರಯಾಣಿಕರ ದಟ್ಟಣೆ ಅಧಿಕವಾಗಿದ್ದು, ವಾಹನಗಳ ಸುಗಮ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಜುಲೈ-2023 ರಿಂದ ಮುಂದುವರೆದಂತೆ ರಾಷ್ಟ್ರೀಯ ರಜಾ ದಿನ ಮತ್ತು ನೌಕರರು ಆಯ್ಕೆ ಮಾಡಿಕೊಂಡ ಹಬ್ಬದ ರಜಾ ದಿನಗಳಂದು ಕರ್ತವ್ಯ ನಿರ್ವಹಿಸಿದ ದಿನಗಳಿಗೆ ಕೋವಿಡ್-19 ಪೂರ್ವದಲ್ಲಿದ್ದಂತೆ ಹೆಚ್ಚುವರಿ ವೇತನವನ್ನು ಪಾವತಿಸುವುದು ಹಾಗೂ ಅವಶ್ಯಕತೆಗೆ ಅನುಗುಣವಾಗಿ ಮಾತ್ರ ಸಿಬ್ಬಂದಿಗಳನ್ನು ಕರ್ತವ್ಯದ ಮೇಲೆ ನಿಯೋಜಿಸುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರು ಸುತ್ತೋಲೆ ಹೊರಡಿಸಿದ್ದಾರೆ.

error: Content is protected !!
Scroll to Top