ಏರ್ ಶೋ ನಲ್ಲಿ ವಿಮಾನಗಳ ನಡುವೆ ಢಿಕ್ಕಿ – ಪೈಲಟ್ ಗಳಿಬ್ಬರು ದುರಂತ ಅಂತ್ಯ..!

(ನ್ಯೂಸ್ ಕಡಬ) newskadaba.com ವಾಷಿಂಗ್ಟನ್​, ಸೆ. 18. ಏರ್ ಶೋನಲ್ಲಿ ವಿಮಾನಗಳು ಪರಸ್ಪರ ಡಿಕ್ಕಿಯಾಗಿ ಪೈಲಟ್​ಗಳು ಮೃತಪಟ್ಟ ಘಟನೆ ಯುಎಸ್​​ನ ನೆವಡ ಪ್ರದೇಶದ ರೆನೊದಲ್ಲಿ ನಡೆದ ನ್ಯಾಷನಲ್​ ಚಾಂಪಿಯನ್​ಷಿಪ್​ ಏರ್​ ರೇಸಸ್ ಆಯಂಡ್​ ಏರ್​ ಶೋನಲ್ಲಿ ಸಂಭವಿಸಿದೆ.

ಮೃತ ಪೈಲಟ್​ಗಳನ್ನು ಮ್ಯಾಸಿ ಹಾಗೂ ಕ್ರಿಶ್ ರಷಿಂಗ್ ಎಂದು ಗುರುತಿಸಲಾಗಿದೆ. ಭಾನುವಾರದಂದು ನಡೆದ ಟಿ-6 ಗೋಲ್ಡ್ ರೇಸ್​ನ ಅಂತಿಮ ಹಂತದಲ್ಲಿ ಲ್ಯಾಂಡ್ ಆಗುವ ಸಮಯದಲ್ಲಿ ಸುಮಾರು 2.15ರ ಹೊತ್ತಿಗೆ ಎರಡು ವಿಮಾನಗಳು ಪರಸ್ಪರ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ.

Also Read  ಶ್ರೀ ಆಂಜನೇಯ ಸ್ವಾಮಿ ಗೆ ಇಷ್ಟವಾದ ಈ 4 ವಸ್ತುಗಳನ್ನು ಅರ್ಪಿಸಿ ನಿಮ್ಮ ಜೀವನದ ಕಷ್ಟಗಳನ್ನು ಪರಿಹರಿಸಿಕೊಳ್ಳಿ

error: Content is protected !!
Scroll to Top