ಭಾರತೀಯ ಯೋಧನ ಅಪಹರಿಸಿ ಹತ್ಯೆ..!

(ನ್ಯೂಸ್ ಕಡಬ) newskadaba.com ಮಣಿಪುರ, ಸೆ. 18. ದುಷ್ಕರ್ಮಿಗಳು ಭಾರತೀಯ ಸೇನಾ ಯೋಧನನ್ನು ಅಪಹರಿಸಿ ಹತ್ಯೆಗೈದ ಘಟನೆ ಮಣಿಪುರ ರಾಜಧಾನಿ ಇಂಫಾಲ್​ನಿಂದ ವರದಿಯಾಗಿದೆ.

ಹುತಾತ್ಮ ಯೋಧನನ್ನು ಇಂಫಾಲ್ ಪಶ್ಚಿಮದ ತರುಂಗ್​ ಮೂಲದ ಸೆರ್ಟೊ ತಂಗ್‌ಥಾಂಗ್ ಕೋಮ್ ಎಂದು ಗುರುತಿಸಲಾಗಿದೆ. ಡಿಫೆನ್ಸ್ ಸೆಕ್ಯುರಿಟಿ ಕಾರ್ಪ್ಸ್‌ನ ಯೋಧ ಕೋಮ್​ರನ್ನು ಕಾಂಗ್‌ಪೋಕ್ಪಿ ಜಿಲ್ಲೆಯ ಲೆಮಾಖೋಂಗ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

ಅಧಿಕಾರಿಗಳ ಮಾಹಿತಿ ಪ್ರಕಾರ, ಕೋಮ್ ರಜೆ ಮೇಲೆ ತಮ್ಮ ಮನೆಗೆ ಹೋಗಿದ್ದರು. ಶನಿವಾರದಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳು ಅವರನ್ನು ಮನೆಯಿಂದ ಅಪಹರಿಸಿದ್ದಾರೆ. ಪ್ರತ್ಯಕ್ಷದರ್ಶಿಯಾಗಿದ್ದ 10 ವರ್ಷದ ಮಗ ಪೊಲೀಸರಿಗೆ ತಿಳಿಸಿರುವಂತೆ, ತಂದೆ ಮನೆಯಲ್ಲಿದ್ದ ಸಂದರ್ಭ ಮೂವರು ಅಪರಿಚಿತರು ಮನೆಯೊಳಗೆ ನುಗ್ಗಿ, ತಂದೆಯ ಹಣೆಗೆ ಪಿಸ್ತೂಲ್ ಇರಿಸಿ ಬಲವಂತವಾಗಿ ಅವರನ್ನು ವಾಹನವೊಂದರಲ್ಲಿ ಕರೆದೊಯ್ದಿದ್ದಾರೆ ಎನ್ನಲಾಗಿದೆ.

Also Read  ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ ➤ ಆರೋಪಿ ವೈದ್ಯ ಅರೆಸ್ಟ್..!!

ಭಾನುವಾರ ಬೆಳಿಗ್ಗೆ 9:30ರ ಸುಮಾರಿಗೆ ಇಂಫಾಲ್ ಪೂರ್ವದ ಸೊಗೋಲ್ಮಾಂಗ್ ಠಾಣಾ ವ್ಯಾಪ್ತಿಯ ಖುನಿಂಗ್‌ಥೆಕ್ ಗ್ರಾಮದಲ್ಲಿ ಮೃತದೇಹ ದೊರೆತಿದೆ ಎನ್ನಲಾಗಿದೆ.

error: Content is protected !!
Scroll to Top