(ನ್ಯೂಸ್ ಕಡಬ) newskadaba.com ಸುರತ್ಕಲ್, ಸೆ. 18. ಇಲ್ಲಿನ ಮಲ್ಲಮಾರ್ ಬೀಚ್ ಗೆ ವಿಹಾರಕ್ಕೆಂದು ಬಂದಿದ್ದ ಮೂವರ ಪೈಕಿ ಒರ್ವ ಸಮುದ್ರಪಾಲಾಗಿದ್ದು ಇಬ್ಬರನ್ನು ಸ್ಥಳೀಯರು ರಕ್ಷಿಸಿದ ಘಟನೆ ರವಿವಾರದಂದು ಸಂಜೆ ನಡೆದಿದೆ.
ಸಮುದ್ರಪಾಲಾದ ವ್ಯಕ್ತಿಯನ್ನು ಬಾಗಲಕೋಟೆ ನಿವಾಸಿ ಮಹಂತೇಶ್(29) ಎಂದು ಗುರುತಿಸಲಾಗಿದೆ. ಈತ ಅಕ್ಕ ಸಾವಿತ್ರಿಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಸ್ನೇಹಿತರ ಜೊತೆಗೆ ವಿಹಾರಕ್ಕೆ ಬಂದಿದ್ದ ಎನ್ನಲಾಗಿದೆ. ಮಹಂತೇಶ್ ನನ್ನು ರಕ್ಷಿಸಿ ಹಿಂದೆ ಎಳೆದು ತರುತ್ತಿದ್ದಾಗ ಮತ್ತೆ ಅಲೆಯ ಹೊಡೆತಕ್ಕೆ ಸಿಲುಕಿ ಮುಳುಗಿ ನಾಪತ್ತೆಯಾಗಿದ್ದಾನೆ. ಈ ಕುರಿತು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Also Read ಮರ್ಧಾಳ: ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ➤ ಹಿಂದಿನ ಕ್ರಿಯಾ ಯೋಜನೆ ರದ್ದುಮಾಡಿ ಹೊಸ ಯೋಜನೆ ತಯಾರಿಗೆ ಆಗ್ರಹ