ಕಡಬ: ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಕಡಬ, ಸೆ. 18. ಕಡಬ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಡಬ ಪೊಲೀಸರು ಬಂಧಿಸಿರುವ ಕುರಿತು ವರದಿಯಾಗಿದೆ.

ಪ್ರಕರಣದ ಆರೋಪಿ ಕಡಬ ತಾಲೂಕು ಕೊಣಾಜೆ ಗ್ರಾಮದ ಗುಜ್ಜಟ್ಟೆ ಕದ್ಯ ಭುವನೇಶ್ವರ ಚಂದ್ರ ಎಂಬಾತನನ್ನು ಮೇಲಾಧಿಕಾರಿಗಳ ಆದೇಶದಂತೆ ಕಡಬ ಠಾಣಾ ಕಾನೂನು ಮತ್ತು ಸುವ್ಯವಸ್ಥೆ ಪಿ.ಎಸ್ಐ ಅಭಿನಂದನ್‌ ಮತ್ತು ತನಿಖಾ ಪಿ.ಎಸ್ಐ ಅಕ್ಷಯ್‌ ಡವಗಿ ಅವರ ಮಾರ್ಗದರ್ಶನದಂತೆ ಕಡಬ ಪೊಲೀಸ್‌ ಠಾಣಾ ಸಿಬ್ಬಂದಿಗಳಾದ ಭವಿತ್‌ ಹಾಗೂ ವಿನೋದ್‌ ಅವರು ಮಂಗಳೂರಿನ ಸೆಂಟ್ರಲ್‌ ರೈಲ್ವೇ ಸ್ಟೇಷನ್‌ ಬಳಿ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Also Read  ಮಂಗಳೂರು: ಲೈಟ್ ಕಂಬವೊಂದರ ಬುಡದಲ್ಲಿ ನವಜಾತ ಶಿಶು ಪತ್ತೆ !!

error: Content is protected !!
Scroll to Top