ಸುಳ್ಯ: ವಿದೇಶದಲ್ಲಿರುವ ಪತಿಯಿಂದ ಪತ್ನಿಗೆ ವಾಟ್ಸಾಪ್ ಮೂಲಕ ತ್ರಿವಳಿ ತಲಾಖ್ ಸಂದೇಶ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 18. ವಿದೇಶದಲ್ಲಿರುವ ಪತಿಯೋರ್ವ ಸುಳ್ಯದಲ್ಲಿರುವ ತನ್ನ ಪತ್ನಿಗೆ ವಾಟ್ಸಪ್‌ ಸಂದೇಶದ ಮೂಲಕ ತ್ರಿವಳಿ ತಲಾಖ್‌ ನೀಡಿರುವ ಘಟನೆ ವರದಿಯಾಗಿದೆ.


ಈ ಬಗ್ಗೆ ಮಹಿಳೆ ಪತಿ ವಿರುದ್ದ ಸುಳ್ಯ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಕೇರಳ ತ್ರಿಶೂರ್‌ ಮೂಲದ ಅಬ್ದುಲ್‌ ರಾಶಿದ್‌ ಎಂಬವರು ಏಳು ವರ್ಷಗಳ ಹಿಂದೆ ಸುಳ್ಯ ಜಯನಗರದ ಯುವತಿಯನ್ನು ವಿವಾಹವಾಗಿದ್ದರು. ವಿವಾಹದ ಬಳಿಕ ಆಕೆಯನ್ನು ಚೆನ್ನಾಗಿ ನೋಡಿಕೊಂಡಿದ್ದು, ಅವರಿಗೆ ಇಬ್ಬರು ಹೆಣ್ಣುಮಕ್ಕಳು ಕೂಡ ಇದ್ದಾರೆ. ಎರಡು ವರ್ಷಗಳ ಮೊದಲು ಪತಿ ಪತ್ನಿಯನ್ನು ವಿದೇಶಕ್ಕೆ ಕರೆಸಿಕೊಂಡಿದ್ದರು. ಬಳಿಕ ಎರಡನೇ ಮಗುವಿನ ಹೆರಿಗೆ ಸಂದರ್ಭ ಪತ್ನಿಯನ್ನು ಸುಳ್ಯದ ತವರು ಮನೆಯಲ್ಲಿ ಬಿಟ್ಟು ವಿದೇಶಕ್ಕೆ ಉದ್ಯೋಗಕ್ಕೆ ತರೆಳಿದ್ದರು. ಕಳೆದ ಆರು ತಿಂಗಳಿನಿಂದ ಸಂಸಾರದಲ್ಲಿ ಅಲ್ಪ ಸ್ವಲ್ಪ ಕಿರಿಕಿರಿ ಉಂಟಾಗಿತ್ತು ಎನ್ನಲಾಗಿದ್ದು ಆದರೆ ಸಂಬಂಧಿಕರು, ಹಿರಿಯರು ಇದರ ಬಗ್ಗೆ ಮಾತನಾಡಿ ಸರಿಪಡಿಸಲು ಪ್ರಯತ್ನಿಸಿದ್ದರು. ಆದರೆ ಯಾವುದನ್ನೂ ಕೇಳದ ರಾಶಿದ್, ಪತ್ನಿಯ ಮೊಬೈಲ್‌ಗೆ ಮೂರು ಬಾರಿ ತಲಾಖ್‌ನ ವಾಟ್ಸಾಪ್‌ ಸಂದೇಶ ಕಳುಹಿಸಿದ್ದು, ಇದರಿಂದ ಮನನೊಂದ ಮಹಿಳೆ ಸುಳ್ಯ ಠಾಣೆ ಮೆಟ್ಟಿಲೇರಿದ್ದಾರೆ.

error: Content is protected !!
Scroll to Top