ಕೋಳಿ ಅಂಕಕ್ಕೆ ಪೊಲೀಸ್ ದಾಳಿ- 8 ಮಂದಿ ವಶಕ್ಕೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ. 18. ಹಣವಾಗಿಟ್ಟು ಪಣವಾಗಿಟ್ಟು ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಧರ್ಮಸ್ಥಳ ಪೊಲೀಸರು 8 ಮಂದಿಯನ್ನು ವಶಕ್ಕೆ ಪಡೆದ ಘಟನೆ ತಾಲೂಕಿನ ಪಟ್ರಮೆ ಗ್ರಾಮದ ಪಟ್ಟೂರು ವಲಸರಿ ಎಂಬಲ್ಲಿ ನಡೆದಿದೆ.

ಸ್ಥಳದಿಂದ ಎಂಟು ಮಂದಿಯ ಸಹಿತ ಒಟ್ಟು 2,350 ರೂ. ನಗದು, 4 ಕೋಳಿ, 2 ಕೋಳಿ ಬಾಲುಗಳು, ಒಂದು ಓಮ್ನಿ ಕಾರು ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ಸ್ವಾಧೀನಪಡಿಸಲಾಗಿದೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Also Read  ಆಲಂಕಾರು: ಬಿಜೆಪಿ ಸಮರ್ಥನಾ ಸಮಾವೇಶ ► ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣ ನಮ್ಮ ಮುಂದಿನ ಗುರಿ- ಡಿ.ಎಸ್.ವೀರಯ್ಯ

error: Content is protected !!
Scroll to Top