(ನ್ಯೂಸ್ ಕಡಬ) newskadaba.com ಸೆ. 17. ಬಾರ್ಲಿ ಸೇವನೆಯಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿದ್ದು, ಹಾಗಾಗಿ ಬಾರ್ಲಿ ಸೇವನೆ ಆರೋಗ್ಯಕ್ಕೆ ಉತ್ತಮವಾಗಿದೆ. ಹಾಗಾದರೆ ಬಾರ್ಲಿ ಸೇವನೆಯಿಂದ ನಮಗೆ ಏನೆಲ್ಲಾ ಪ್ರಯೋಜನವಿದೆ ಎಂಬುದನ್ನು ತಿಳಿಯೋಣ.
ಬಾರ್ಲಿ ಸೇವಿಸುವುದರಿಂದ ದೀರ್ಘಕಾಲ ಹೊಳೆಯುವ ತ್ವಚೆಯನ್ನು ಪಡೆಯಬಹುದು. ಬಾರ್ಲಿ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಬಾರ್ಲಿಯಲ್ಲಿ ಫೈಬರ್ ಅಂಶ ಸಮೃದ್ಧವಾಗಿದ್ದು, ಇದು ಗ್ಯಾಸ್, ಆಮ್ಲೀಯತೆ, ಮಲಬದ್ಧತೆ ಹಾಗೂ ಹೊಟ್ಟೆಯುಬ್ಬರ ಸಮಸ್ಯೆಯನ್ನು ನಿವಾರಿಸುತ್ತದೆ. ಅಲ್ಲದೇ ಇದು ಅತಿಸಾರ, ವಾಂತಿ ಸಮಸ್ಯೆಯನ್ನೂ ನಿವಾರಿಸುತ್ತದೆ. ರಕ್ತ ಶುದ್ಧೀಕರಣದ ಸಾಮರ್ಥ್ಯ ಹೊಂದಿರುವ ಬಾರ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೊಲಗಿಸುವಲ್ಲಿ ಪಾತ್ರ ವಹಿಸುತ್ತದೆ. ಇದರಿಂದ ಹೃದಯಾಘಾತದ ಸಮಸ್ಯೆ ಕಾಡುವುದಿಲ್ಲ. ಇದರಲ್ಲಿ ಉರಿಯೂತ ನಿವಾರಕ ಗುಣವಿದ್ದು, ಇದು ಕೀಲು ನೋವು, ಸಂಧಿವಾತ, ಸ್ನಾಯು ನೋವನ್ನು ನಿವಾರಿಸುತ್ತದೆ. (ತಜ್ಞರ ಅಭಿಪ್ರಾಯ ಉತ್ತಮ)