ನಮೂನೆ 29, 30 ಭರ್ತಿ ಮಾಡದೆ ವಾಹನ ಮಾರಾಟ ಮಾಡುವವರಿಗೆ ಎಚ್ಚರಿಕೆ ► ವಾಹನ ಅಪಘಾತಕ್ಕೀಡಾದಲ್ಲಿ ಮಾರಾಟಗಾರರೇ ಜವಾಬ್ದಾರರು

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.07. ವಾಹನ ಮಾರಾಟಗಾರರು ನಮೂನೆ 29( ದ್ವಿಪ್ರತಿ), 30 ಭರ್ತಿ ಮಾಡದೇ ಹಾಗೂ ದಿನಾಂಕ ನಮೂದಿಸದೇ ಖಾಲಿ ನಮೂನೆಗಳಿಗೆ ಸಹಿ ಮಾಡಿ ಖರೀದಿದಾರರಿಗೆ ನೀಡುತ್ತಿರುವುದರಿಂದ ಇಂತಹ ವಾಹನಗಳು ಅಪಘಾತಕ್ಕೀಡಾದಲ್ಲಿ ಅಥವಾ ಕಾನೂನು ಬಾಹಿರ ಚಟುವಟಿಕೆಗಳಿಗೆ ಉಪಯೋಗಿಸಿದ್ದಲ್ಲಿ ವಾಹನ ಮಾರಾಟಗಾರರೇ ಜವಾಬ್ದಾರರಾಗುತ್ತಾರೆ ಎಂದು ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

ವಾಹನ ಮಾರಾಟ ಮಾಡಿದ ದಿನಾಂಕದಿಂದ ಮಾರಾಟಗಾರರು 14 ದಿನಗಳೊಳಗಡೆ ಆರ್.ಟಿ.ಒ ಕಛೇರಿಗೆ ಮಾಹಿತಿ ನೀಡಿ ಸ್ವೀಕೃತಿ ಪಡೆಯಬೇಕು. ಖರೀದಿದಾರರು ಖರೀದಿ ದಿನಾಂಕದಿಂದ 30 ದಿನದೊಳಗೆ ಆರ್.ಟಿ.ಒ ಕಛೇರಿಯಲ್ಲಿ ವರ್ಗಾವಣೆ ಮಾಡಿಕೊಳ್ಳಲು ಸೂಚಿಸಬೇಕು. ನಮೂನೆ 29 ಮತ್ತು 30 ಭರ್ತಿ ಮಾಡಿದ ನಂತರವೇ ಖರೀದಿದಾರರಿಗೆ ವಾಹನ ನೀಡಿ ಖರೀದಿದಾರರ ವಿಳಾಸ ದಾಖಲೆ, ಭಾವಚಿತ್ರ ಮತ್ತು ಪಾನ್ ಕಾರ್ಡ್ ಪ್ರತಿಗಳನ್ನು ಪಡೆದುಕೊಳ್ಳಬೇಕು. ಮಾಲಕತ್ವ ವರ್ಗಾವಣೆಯಾಗದೇ ವಾಹನಗಳು ತನಿಖಾ ಸಮಯದಲ್ಲಿ ಓಡಾಡುವುದು ಕಂಡುಬಂದಲ್ಲಿ ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳಲಾಗುವುದು ಹಾಗೂ ನಿಗದಿತ ದಂಡ ವಸೂಲಿ ಮಾಡಲಾಗುವುದು ಎಂದು ಉಪ ಸಾರಿಗೆ ಆಯುಕ್ತರಾದ ಜಿ.ಎಸ್. ಹೆಗಡೆ ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ (ಪ್ರಭಾರ) ಇವರ ಪ್ರಕಟಣೆ ತಿಳಿಸಿದೆ.

Also Read  ಎಂಡೋಸಲ್ಫಾನ್ ಸಂತ್ರಸ್ತರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ

error: Content is protected !!
Scroll to Top