ಬೆಂಗಳೂರು- ಮಂಗಳೂರು ರೈಲು; ಇಂದಿನಿಂದ ಮುರ್ಡೇಶ್ವರದವರೆಗೂ ವಿಸ್ತರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 16. ಬೆಂಗಳೂರು-ಮೈಸೂರು- ಮಂಗಳೂರು ರೈಲು (16585/6) ಇಂದಿನಿಂದ (ಸೆ. 16) ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರದವರೆಗೆ ಸಂಚರಿಸಲಿದೆ.

ಈ ರೈಲು ಎಂದಿನಂತೆ ಮಧ್ಯಾಹ್ನ 3.30ಕ್ಕೆ ಮುರ್ಡೇಶ್ವರದಿಂದ ಹೊರಟು, ಮಂಗಳೂರಿಗೆ ಸಂಜೆ 6.35ಕ್ಕೆ ಬಂದು, ಬೆಳಿಗ್ಗೆ 6ಕ್ಕೆ ಬೆಂಗಳೂರು ತಲುಪುತ್ತದೆ. ಬೆಂಗಳೂರಿನಿಂದ ರಾತ್ರಿ 9 ಗಂಟೆಗೆ ಹೊರಟು ಮೈಸೂರು ಮೂಲಕ ಬೆಳಿಗ್ಗೆ 9.05ಕ್ಕೆ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣ ತಲುಪುತ್ತದೆ. ವಾರದಲ್ಲಿ ಆರು ದಿನ ಈ ರೈಲಿನ ಸೇವೆ ಇದೆ ಎಂದು ಪ್ರಕಟಣೆ ತಿಳಿಸಿದೆ.

Also Read  ಮಳೆಯಿಂದಾಗಿ ಭಾರೀ ಪ್ರಮಾಣದಲ್ಲಿ ಧರೆ ಕುಸಿತ ➤ ಸುಳ್ಯ- ಪಾಣತ್ತೂರು ಅಂತರಾಜ್ಯ ರಸ್ತೆ ಸಂಪರ್ಕ ಕಡಿತ

error: Content is protected !!
Scroll to Top