ಖಾಸಗಿ ದೃಶ್ಯ ಸೆರೆ ಹಿಡಿದು ವೈರಲ್ ಮಾಡೋದಾಗಿ ಬೆದರಿಕೆ- ಇಬ್ಬರು ಅರೆಸ್ಟ್..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 16. ಹೋಟೆಲ್‌ ರೂಮ್‌ ಒಂದರಲ್ಲಿ ಖಾಸಗಿ ವಿಡಿಯೋ ಸೆರೆಹಿಡಿದು 1 ಲಕ್ಷ ರೂ. ನೀಡುವಂತೆ ಎಂಬಿಎ ವಿದ್ಯಾರ್ಥಿನಿಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಮಹಿಳೆ ಸೇರಿ ಇಬ್ಬರನ್ನು ಚಂದ್ರಾ ಲೇಔಟ್‌ ಠಾಣಾ ಪೊಲೀಸರು ಬಂಧಿಸಿದ ಕುರಿತು ವರದಿಯಾಗಿದೆ.


ಬಂಧಿತರನ್ನ ನಯನಾ ಹಾಗೂ ಕಿರಣ್‌ ಎಂದು ಗುರುತಿಸಲಾಗಿದೆ. ಇವರಿಬ್ಬರು ಸೇರಿಕೊಂಡು ಹೋಟೆಲ್‌ ಪ್ರಾರಂಭಿಸಿದ್ದರು. ಈ ಹೋಟೆಲ್ ಎಂಬಿಎ ವಿದ್ಯಾರ್ಥಿನಿಯೋರ್ವಳು ತನ್ನ ಪ್ರಿಯಕರನ ಜತೆಗೆ ಆಗಾಗ ಬಂದು ರೂಮ್‌ ಪಡೆಯುತ್ತಿದ್ದಳು. ಇದನ್ನೇ ಉಪಯೋಗಿಸಿಕೊಂಡ ನಯನಾ ಹಾಗೂ ಕಿರಣ್ ಯುವತಿಯ ಸ್ನೇಹಿತನ ಜೊತೆಯಿದ್ದ ಖಾಸಗಿ ಫೋಟೊ ಹಾಗೂ ವಿಡಿಯೋಗಳನ್ನು ಸೆರೆಹಿಡಿದು, ಯುವತಿಯ ಮೊಬೈಲ್‌ಗೆ ಕಳುಹಿಸಿ, 1 ಲಕ್ಷ ರೂ. ನೀಡಬೇಕು. ಇಲ್ಲದಿದ್ದರೆ ಈ ಫೋಟೊ ಹಾಗೂ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬ್ಲ್ಯಾಕ್‌ಮೇಲ್‌ ಮಾಡಿದ್ದರು. ಇದರಿಂದ ಗಾಬರಿಗೊಂಡ ಯುವತಿ ಘಟನೆಯ ಕುರಿತು ಚಂದ್ರಲೇಔಟ್‌ ಠಾಣೆಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Also Read  ತಾಜ್ ವೆಸ್ಟ್ ಎಂಡ್ ಹೊಟೇಲ್ ಗೆ ಬಾಂಬ್ ಬೆದರಿಕೆ ಇ-ಮೇಲ್

error: Content is protected !!
Scroll to Top