ಜೇಸಿಐ ಕಡಬ ಕದಂಬ ಘಟಕದ ಕದಂಬೋತ್ಸವ -2023 ಸಮಾರೋಪ – ಇಂದು ಕಡಬದಲ್ಲಿ ಚಲನಚಿತ್ರ ನಟ ಉಮೇಶ್ ಮಿಜಾರ್ ಬಳಗದಿಂದ ‘ತೆಲಿಕೆದ ಗೊಂಚಿಲ್’ ಹಾಸ್ಯ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಸೆ.16. ಜೇಸಿಐ ಕಡಬ ಕದಂಬ ಘಟಕದ ಜೇಸಿ ಸಪ್ತಾಹ ‘ಕದಂಬೋತ್ಸವ – 2023’ದ ಸಮಾರೋಪ ಸಮಾರಂಭದ ಅಂಗವಾಗಿ ಇಂದು ಕಡಬದಲ್ಲಿ 2 ಗಂಟೆಗಳ ನಿರಂತರ ಹಾಸ್ಯ ಕಾರ್ಯಕ್ರಮ ನಡೆಯಲಿದೆ.

ನಮ್ಮ ಕಲಾವಿದೆರ್ ಬೆದ್ರ ತಂಡದ ಬಲೆ ತೆಲಿಪಾಲೆ ಖ್ಯಾತಿಯ ಉಮೇಶ್ ಮಿಜಾರ್ ಬಳಗದಿಂದ ‘ತೆಲಿಕೆದ ಗೊಂಚಿಲ್’ ನಾನ್ ಸ್ಟಾಪ್ ಕಾಮಿಡಿ, ಸಾರಿ ಡ್ಯಾನ್ಸ್, ಮಿಮಿಕ್ರಿ, ಸಿಂಗಿಂಗ್ ಸೇರಿದಂತೆ 2 ಗಂಟೆಗಳ ನಿರಂತರ ಹಾಸ್ಯ ಕಾರ್ಯಕ್ರಮವು ಇಂದು ಸಂಜೆ 6 ಗಂಟೆಗೆ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಜೇಸಿಐ ಕಡಬ ಕದಂಬ ಘಟಕದ ಅಧ್ಯಕ್ಷರಾದ ಅಭಿಷೇಕ್ ಜಿ.ಎಂ. ಹಾಗೂ ಕಾರ್ಯದರ್ಶಿ ರಾಜೇಶ್ ಎ.ಕೆ‌. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಸುಳ್ಯ: ಕಟ್ಟಿಂಗ್ ಮೆಷಿನ್ ತಾಗಿ ತೀವ್ರ ರಕ್ತಸ್ರಾವ..! ➤ ಕಾರ್ಮಿಕ ಮೃತ್ಯು

error: Content is protected !!
Scroll to Top