ಅಕ್ರಮ ಮರಳು ಸಾಗಾಟ- ಮೂವರ ಬಂಧನ

(ನ್ಯೂಸ್ ಕಡಬ) newskadaba.com ಕಾಪು, ಸೆ. 16. ಅಕ್ರಮ ಮರಳು ಸಾಗಿಸುತ್ತಿದ್ದ ಆರೋಪಕ್ಕೆ ಸಂಬಂಧಿಸಿ ಟೆಂಪೋ ಸಹಿತ ಮೂವರನ್ನು ಕಾಪು ಪೊಲೀಸರು ಬಂಧಿಸಿರುವ ಘಟನೆ ಮಣಿಪುರ ಗ್ರಾಮದ ದೆಂದೂರುಕಟ್ಟೆ ಎಂಬಲ್ಲಿ ನಡೆದಿದೆ.


ಬಂಧಿತರನ್ನು ಟೆಂಪೋ ಚಾಲಕ ಕರಂಬಳ್ಳಿಯ ನಜೀರ್(42), ಕುರ್ಕಾಲಿನ ಜೀವನ್ ಶೆಟ್ಟಿ(38) ಹಾಗೂ ಮಿಥುನ್ ಶೆಟ್ಟಿ(32) ಎಂದು ಗುರುತಿಸಲಾಗಿದೆ. ಆರೋಪಿಗಳು ಇತ್ತೀಚೆಗೆ ಪಾಂಗಾಳ ಹೊಳೆಯಿಂದ ಮರಳನ್ನು ತೆಗೆಸಿ ಖಾಸಗಿ ಜಾಗದಲ್ಲಿ ಸಂಗ್ರಹಿಟ್ಟುಕೊಂಡಿದ್ದು, ಅದನ್ನು ಟೆಂಪೋದಲ್ಲಿ ತುಂಬಿಸಿ ಸಾಗಿಸುತ್ತಿದ್ದಾಗ ಕಾಪು ಎಸ್ಸೈ ಅಬ್ದುಲ್ ಖಾದರ್ ನೇತೃತ್ವದ ತಂಡ ದಾಳಿ ನಡೆಸಿ, ಮರಳು ಸಾಗಿಸುತ್ತಿದ್ದ 407ಟೆಂಪೋ ಮತ್ತು ಅದರಲ್ಲಿದ್ದ 9,000ರೂ. ಮೌಲ್ಯದ ಮರಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಬೆಳ್ಳಾರೆ ಘಟಕದ ಗೃಹರಕ್ಷಕದಳ ಕಛೇರಿಗೆ ಜಿಲ್ಲಾ ಸಮಾದೇಷ್ಠರ ಭೇಟಿ

error: Content is protected !!
Scroll to Top