(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 16. ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ (ಸೆ. 15) ರಬೀವುಲ್ ಅವ್ವಲ್ ತಿಂಗಳ ಚಂದ್ರದರ್ಶನವಾದ ಯಾವುದೇ ಮಾಹಿತಿ ಇಲ್ಲದ ಕಾರಣ ಸಫರ್ 30 ಪೂರ್ತಿಗೊಳಿಸಿ ಇಂದು ಸೆ. 16ರ ಶನಿವಾರ ಅಸ್ತಮಿಸಿದ ರವಿವಾರ ರಾತ್ರಿ ರಬೀವುಲ್ ಅವ್ವಲ್ 1 ಆಗಿರುತ್ತದೆ ಎಂದು ದ.ಕ. ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ತಿಳಿಸಿದ್ದಾರೆ. ಸೆ. 28ರಂದು ರಬೀವುಲ್ ಅವ್ವಲ್ 12 ಮೀಲಾದುನ್ನಬೀ ದಿನವಾಗಿರುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ನಾಳೆ(ಸೆ. 17) ರಬೀವುಲ್ ಅವ್ವಲ್ ತಿಂಗಳಾರಂಭ- ಸೆ. 28ರಂದು ಮೀಲಾದುನ್ನಬಿ; ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್
