ದೇವಾಲಯಗಳಲ್ಲಿ ಅರ್ಚಕರಾಗಿ ಮಹಿಳೆಯರ ನೇಮಕ- ಸಿಎಂ ಸ್ಟಾಲಿನ್ ಘೋಷಣೆ

(ನ್ಯೂಸ್ ಕಡಬ) newskadaba.com  ಚೆನ್ನೈ, ಸೆ. 15. ದ್ರಾವಿಡ ಮಾದರಿಯ ಆಡಳಿತದ ನೀತಿಯಂತೆ, ತಮಿಳುನಾಡಿನಲ್ಲಿ ಶೀಘ್ರದಲ್ಲೇ ಮಹಿಳೆಯರು ದೇವಾಲಯದಲ್ಲಿ ಆರ್ಚಕರಾಗಿ ಕಾರ್ಯನಿರ್ವಹಿಸಲಿದ್ದಾರೆಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಿಳಿಸಿದ್ದಾರೆ.

ಮಹಿಳೆಯರು ಪೈಲಟ್ ಗಳು ಹಾಗೂ ಬಾಹ್ಯಾಕಾಶಯಾತ್ರಿಗಳಾಗಿ ಸಾಧನೆ ಮಾಡಿರುವ ಹೊರತಾಗಿಯೂ
ಅವರನ್ನು ಅಪವಿತ್ರವೆಂದು ಪರಿಗಣಿಸಿ ದೇವಾಲಯಲ್ಲಿ ಪೌರೋಹಿತ್ಯದಂತಹ ಪವಿತ್ರವಾದ ಪಾತ್ರಗಳನ್ನು ನಿರ್ವಹಿಸುವುದರಿಂದ ದೂರವಿಡಲಾಗಿದೆ. ಸ್ತ್ರೀದೇವತೆಗಳ ದೇವಾಲಯದಲ್ಲೂ ಅವರನ್ನು ದೂರವಿಡಲಾಗಿದೆ. ಆದರೆ ಕೊನೆಗೂ ಇಲ್ಲಿ ಬದಲಾವಣೆಯಾಗಿದೆ ಎಂದು ಸ್ಟಾಲಿನ್ ಅವರು ಸಾಮಾಜಿಕ ಜಾಲತಾಣ ‘x’ ನಲ್ಲಿ ಪೋಸ್ಟ್ ಮಾಡಿದ್ದಾರೆ.

Also Read  'ಅನ್ನ’ ತಿನ್ನೋದ್ರಿಂದ ಸಣ್ಣಗಾಗುತ್ತಾ?? - ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

error: Content is protected !!
Scroll to Top