ಚರಿತ್ರೆ ಪ್ರಸಿದ್ಧ ಬೆಳ್ಳಾರೆ ಮಖಾಂ ಉರೂಸಿಗೆ ವಿದ್ಯುಕ್ತ ಚಾಲನೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಫೆ.07. ಇಲ್ಲಿನ ಝಕರಿಯಾ ಜುಮಾ ಮಸೀದಿಯಲ್ಲಿ ಫೆಬ್ರವರಿ 7 ರಿಂದ 11 ರವರೆಗೆ ನಡೆಯಲಿರುವ ಚರಿತ್ರೆ ಪ್ರಸಿದ್ದ ಬೆಳ್ಳಾರೆ ವಲಿಯುಲ್ಲಾಹಿ ಮಖಾಂ ಉರೂಸ್ ಗೆ ಝಕರಿಯಾ ಜುಮಾ ಮಸೀದಿ ಬೆಳ್ಳಾರೆ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಉರೂಸ್ ಸಮಿತಿಯ ಅಧ್ಯಕ್ಷರಾದ ಕೆ.ಎಂ. ಮಹಮ್ಮದ್ ಹಾಜಿ ಬೆಳ್ಳಾರೆ ಯವರು ಧ್ವಜಾರೋಹಣ ನೆರವೇರಿಸುವ ಮೂಲಕ ಬುಧವಾರದಂದು ವಿದ್ಯುಕ್ತವಾಗಿ ಚಾಲನೆಯನ್ನು ನೀಡಿದರು.

ಬೆಳ್ಳಾರೆ ದರ್ಗಾ ಶರೀಫಿನಲ್ಲಿ ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಖತೀಬರಾದ ತಾಜುದ್ದೀನ್ ರಹ್ಮಾನಿಯವರ ನೇತೃತ್ವದಲ್ಲಿ ಕೂಟು ಝಿಯಾರತ್ ನಡೆಯಿತು. ಈ ಸಂದರ್ಭದಲ್ಲಿ ಬೆಳ್ಳಾರೆ ಮಸೀದಿಯ ಮುದರ್ರಿಸರಾದ ತಾಜುದ್ದೀನ್ ರಹ್ಮಾನಿ, ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಯು. ಹೆಚ್. ಅಬೂಬಕ್ಕರ್, ಮಸೀದಿಯ ಕೋಶಾಧಿಕಾರಿ ಹಾಜಿ ಕೆ. ಮಮ್ಮಾಲಿ, ಹಿದಾಯ ಎಜುಕೇಶನಲ್ ಟ್ರಸ್ಟ್ ಬೆಳ್ಳಾರೆಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ಬೆಳ್ಳಾರೆ ಮಸೀದಿಯ ಆಡಳಿತ ಮಂಡಳಿ ಸದಸ್ಯರುಗಳಾದ ಆಶೀರ್ ಎ.ಬಿ., ಬಿ.ಎ. ಬಶೀರ್, ಯು.ಪಿ. ಬಶೀರ್, ಮಸೀದಿಯ ಜೊತೆ ಕಾರ್ಯದರ್ಶಿ ಬಶೀರ್ ಕಲ್ಲಪಣೆ, ಜಮಾಲುದ್ದೀನ್ ಕೆ. ಎಸ್., ಜಮಾಅತಿನ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬೆಳ್ಳಾರೆ ಜಮಾಅತಿನ ಆಡಳಿತ ಮಂಡಳಿ ಯ ಸದಸ್ಯರಾದ ಕೆ.ಎ. ಬಶೀರ್ ಸ್ವಾಗತಿಸಿ, ವಂದಿಸಿದರು.

Also Read  ಕಡಬ: KSRTC ಚಾಲಕನ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆ ➤ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

 

error: Content is protected !!
Scroll to Top