ಬಿಗ್ ಬಾಸ್ ಸೀಸನ್ 10- ಸಂಭಾವ್ಯ ಸ್ಪರ್ಧಿಗಳ ಪಟ್ಟಿ ರಿಲೀಸ್…!

(ನ್ಯೂಸ್ ಕಡಬ) newskadaba.com  ಬೆಂಗಳೂರು, ಸೆ. 15.ಈ ಬಾರಿಯ ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಗೆ ಭರ್ಜರಿ ಸಿದ್ದತೆ ನಡೆಯುತ್ತಿದೆ. ಬಿಗ್ ಬಾಸ್ ಸೀಸನ್ 10ಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸಂಭಾವ್ಯ ಸ್ಪರ್ಧಿಗಳ ಪಟ್ಟಿಯನ್ನು ವೈರಲ್ ಮಾಡಲಾಗಿದೆ. ಇದರೊಂದಿಗೆ ಯಾರೆಲ್ಲಾ ಭಾಗಿಯಾಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಬಿಗ್ ಬಾಸ್ ಕನ್ನಡ ಸೀಸನ್ 10 ಕಾರ್ಯಕ್ರಮದ ನಿರೀಕ್ಷೆಯಲ್ಲಿ ಕನ್ನಡಿಗರು ಸಹ ಇದ್ದಾರೆ ಎನ್ನಲಾಗಿದೆ.

 

ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳು ವೈರಲ್ ಆಗುತ್ತಿದ್ದು, ಅದರಂತೆ ಸೆಪ್ಟೆಂಬರ್ 30ರಂದು ಓ ಟಿ ಟಿ ಸೀಸನ್- 2 ಆರಂಭವಾಗಿ ನಂತರ ಬಿಗ್ ಬಾಸ್ ಸೀಸನ್ 10 ನಡೆಯಲಿದೆ ಎಂದು ಹೇಳಲಾಗುತ್ತಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ನಡೆಯಬೇಕಿದ್ದ ಅನುಬಂಧ ಅವಾರ್ಡ್ ಶೂಟಿಂಗ್ ಕಾರ್ಯಕ್ರಮವನ್ನು ಸೆಪ್ಟೆಂಬರ್ ಮೂರನೇ ವಾರದಲ್ಲಿ ಕಲರ್ಸ್ ಕನ್ನಡ ಪ್ರಸಾರ ಮಾಡಲು ನಿರ್ಧರಿಸಿದೆ. ಇದಾದ ನಂತರ ಬಿಗ್ ಬಾಸ್ ಸೆಪ್ಟೆಂಬರ್ ಅಂತ್ಯಕ್ಕೆ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ.

Also Read  ತನಗೆ ಸಿಕ್ಕ ಸ್ಕೂಟರ್ ನ್ನು ದಾನ ಮಾಡಿ ಕೊಟ್ಟ ಮಾತಿನಂತೆ ನಡೆದ ಡ್ರೋನ್‌ ಪ್ರತಾಪ್..!

ಸ್ಪರ್ಧಿಗಳ ಹೆಸರುಗಳ ಪೈಕಿ ನಾಗಿಣಿ 2 ದಾರಾವಾಹಿಯ ಜೋಡಿ ನಿನಾದ್ ಹರಿತ್ಸ ಮತ್ತು ನಮೃತಾ ಗೌಡ, ಕಿರುತೆರೆಯ ಜನಪ್ರಿಯ ನಟಿ ಮೇಘ ಶೆಟ್ಟಿ, ಹಾಸ್ಯನಟ ದಿವಂಗತ ಬುಲೆಟ್ ಪ್ರಕಾಶ್ ರವರ ಪುತ್ರ ರಕ್ಷಕ್, ಎಕ್ಸ್ ಕ್ಯೂಸ್ ಮಿ ಸಿನಿಮಾ ಖ್ಯಾತಿಯ ಸುನಿಲ್ ರಾವ್, ಹುಚ್ಚು ಸಿನಿಮಾ ನಟಿ ರೇಖಾ, ರಾಪರ್ ಸಿಂಗರ್ ಇಶಾನಿ, ನಟಿ ಆಶಾ ಭಟ್ ಮತ್ತು ರೀಲ್ಸ್ ಗಳಲ್ಲಿ ಖ್ಯಾತಿ ಪಡೆದಿರುವಂತಹ ಭೂಮಿಕ ಹಾಗೂ ಇನ್ನೂ ಹಲವರ ಹೆಸರುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಏನೇ ಇದ್ದರೂ ಬಿಗ್ ಬಾಸ್ ಮನೆಗೆ ಆಡಿಶನ್ ನಡೆದು ಶೋ ಆರಂಭವಾದ ನಂತರವೇ ಯಾರು ಬರಲಿದ್ದಾರೆ ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ.

Also Read  ಹಳಿಬಿಟ್ಟ ಗೂಡ್ಸ್- ರೈಲು ಸಂಚಾರ ನಿಷೇಧ

error: Content is protected !!
Scroll to Top