(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 14. ಮಹಿಳೆಯರ ದೇಹದಲ್ಲಿ ಆಗುವ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಬೀರುವ ಪರಿಣಾಮವು ಋತುಬಂಧ ಸಮಸ್ಯೆಯಲ್ಲಿಯು ಆಗುತ್ತದೆ ಇದಕ್ಕೆ ಆಶಾ ಕಾರ್ಯಕರ್ತೆಯರು ಮಹಿಳೆಯರಿಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಅಭಿಪ್ರಾಯಪಟ್ಟರು. ಅವರು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಮಾಹಿತಿ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಹೆಣ್ಣುಮಕ್ಕಳಿಗೆ ಆರೋಗ್ಯ ಜಾಗೃತಿ ಮೂಡಿಸಬೇಕು. ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಋತುಬಂಧ ವಿಷಯದಲ್ಲಿ ಸಂಕೋಚ ಸ್ವಭಾವ ಜಾಸ್ತಿ ಇರುತ್ತದೆ. ವ್ಯಾಯಾಮ ಸೇರಿದಂತೆ ಆರೋಗ್ಯ ವೃದ್ಧಿಗೆ ಅಗತ್ಯ ಸೇವೆಗಳನ್ನು ನೀಡುವ ಮೂಲಕ ಸಾರ್ವಜನಿಕರಿಗೆ ನೆರವಾಗಬೇಕು ಎಂದು ತಿಳಿಸಿದರು.
ನಂತರ ಲೇಡಿಗೋಶನ್ ಆಸ್ಪತ್ರೆಯ ಪ್ರಸೂತಿ ತಜ್ಞರಾದ ದುರ್ಗಾಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ ಋತುಬಂಧದ ಕುರಿತು ಮಾಹಿತಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸುತ್ತಿರುವುದು ಉತ್ತಮ ಕೆಲಸ. ಋತುಬಂಧದ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಬಾರದು. ಗ್ರಾಮೀಣ ಭಾಗದಲ್ಲಿ ಇದರ ಬಗ್ಗೆ ಅರಿವು ಮೂಡಿಸುವ ಕಾರ್ಯ ಹೆಚ್ಚಾಗಬೇಕಾಗಿದೆ ಎಂದರು. ಪ್ರತಿದಿನ ನಿಗದಿತ ಮನೆಕೆಲಸಗಳು ಅಥವಾ ತೋಟದ ಕೆಲಸಗಳನ್ನು ಮಾಡುವುದು ಆರೋಗ್ಯಕರವಾದ ಆಹಾರಗಳಾದ ಸಿರಿಧಾನ್ಯ, ರಾಗಿ, ಬೀಸ್, ಮಾಂಸ, ಮೀನು, ಹಾಲು, ಮೊಟ್ಟೆ, ಹಾಗೂ ವಿವಿಧ ರೀತಿಯು ಹಣ್ಣು, ತರಕಾರಿಗಳನ್ನು ಸೇವಿಸಬೇಕು. ಉಪ್ಪು ಮತ್ತು ಸಕ್ಕರೆಯನ್ನು ಕಡಿಮೆ ಮಾಡುವುದನ್ನು ರೂಡಿಸಿಕೊಳ್ಳಬೇಕು ಎಂದು ಕಿವಿ ಮಾತು ನುಡಿದರು.
ಸೋಹೋ ಫೌಂಡೇಶನ್ ಹಾಗೂ ಮಿರರ್ ಫೆರಜ್ಯೋಟಿಕ್ಸ್ ಸಂಸ್ಥೆ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ ಸಹಯೋಗದೊಂದಿಗೆ ಮಿರರ್- ಋತುಬಂಧ ಜಾಗೃತಿ ಎಲ್ಲರಿಗೂ ಮತ್ತು ಸಾಮರ್ಥ್ಯಾಭಿವೃದ್ಧಿ ತರಬೇತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ತರಬೇತಿ ನೀಡಲು ಆಯೋಜಿಸಲಾಗಿತ್ತು. ಈ ತರಬೇತಿಯಲ್ಲಿ ಮಿರರ್ ಋತುಬಂದ ಜಾಗೃತಿ ಎಲ್ಲರಿಗೂ ವಿಷಯದ ಮಾಹಿತಿ ಕರಪತ್ರವನ್ನು ಆರ್.ಸಿ.ಎಚ್ ಅಧಿಕಾರಿ ಡಾ. ರಾಜೇಶ್ ಹಾಗೂ ಸರ್ಕಾರಿ ಲೇಡಿಗೋಶನ್, ಜಿಲ್ಲಾ ಸರ್ಕಾರಿ ಲೇಡಿಗೋಶನ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ದುರ್ಗಾಪ್ರಸಾದ್ ಮತ್ತು ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಜೋತಿ ಅವರು ಉದ್ಘಾಟಿಸಿ ಋತುಬಂಧ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು. ಜಿಲ್ಲಾ ಆಶಾ ಮೆಂಟರ್ ಹಾಗೂ ಸೋಹೋ ಫೌಂಡೇಶನ್ ಮತ್ತು ಮಿರರ್ ಫೆರಜ್ಯೋಟಿಕ್ಸ್ ಸಂಸ್ಥೆಯಿಂದ ಸ್ಪೇಸ್, ಮಿಶ್ರ ಮ್ಯಾನೇಜರ್ ಆಪರೇಷನ್ಸ್ ಹಾಗೂ ಅನಿಲ್‍ಕುಮಾರ್, ಸಹಾಯಕ ವ್ಯವಸ್ಥಾಪಕರು, ಉಪಸ್ಥಿತಿರಿದ್ದರು.