ಅನಾರೋಗ್ಯ ಪೀಡಿತ ಯುವತಿಗೆ ಬೇಕಾಗಿದೆ ದಾನಿಗಳ ನೆರವಿನ ಹಸ್ತ ► ದ್ವಿತೀಯ ಪಿಯುಸಿ ಓದಿದ್ದರೂ ಕಿಡ್ನಿ ವೈಫಲ್ಯದಿಂದ ಕಮರಿದೆ ಭವಿಷ್ಯದ ಕನಸುಗಳು

(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ಫೆ.07. ತಾಯಿಯ ಪ್ರೇಮ ಕಾಣದೆ, ತಂದೆಯ ಆಸರೆಯಿಲ್ಲದೆ ನೊಂದಿದ್ದರೂ ತಾನೂ ಎಲ್ಲರಂತೆ ದುಡಿದು ತನ್ನ ಬದುಕನ್ನು ಕಟ್ಟಿಕೊಳ್ಳಬೇಕೆಂದು ಹಂಬಲಿಸುತ್ತಿದ್ದ ಯುವತಿಯೋರ್ವಳು ಇದೀಗ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಕೂಲಿ ಮಾಡಿಕೊಂಡು ಬದುಕುವ ಅತ್ತೆಯ ಆಶ್ರಯದಲ್ಲಿ ಬೆಳೆದಿರುವ ಆಕೆಗೆ ಸಹೃದಯರ ನೆರವಿನ ಹಸ್ತ ಬೇಕಾಗಿದೆ.

ಮಂಗಳೂರು ತಾಲೂಕು ದರೆಗುಡ್ಡೆ ಕೆಲ್ಲಪುತ್ತಿಗೆಯ ಮೇಲಿನ ಮನೆಯ ಡೊಂಬಯ್ಯ ಪೂಜಾರಿ ಎಂಬವರ ಪುತ್ರಿ ಪೂಜಾ ಪೂಜಾರಿ(23) ಎಂಬಾಕೆ ಕಿಡ್ನಿ ವೈಫಲ್ಯಕ್ಕೀಡಾಗಿರುವ ಯುವತಿ. ಈಕೆ 2 ವರ್ಷದ ಮಗುವಿರುವಾಗಲೇ ತಾಯಿಯನ್ನು ಕಳೆದುಕೊಂಡು ತಂದೆಯೂ ಬಿಟ್ಟುಹೋಗಿದ್ದು, ಅನಾಥವಾಗಿದ್ದ ಈಕೆ ಆಶ್ರಯ ಪಡೆದದ್ದು ಬಡ ವಿಧವೆಯಾಗಿರುವ ಅತ್ತೆಯ ಮನೆಯಲ್ಲಿ. ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಅತ್ತೆಗೆ ನೆರವಾಗುತ್ತಿದ್ದ ಪೂಜಾಳಿಗೆ ಕಳೆದ ಮೂರು ವರ್ಷಗಳಿಂದ ಅಧಿಕ ರಕ್ತದೊತ್ತಡ ಇತ್ತು. ಆರ್ಥಿಕ ಸಂಕಷ್ಟದಲ್ಲೂ ದ್ವಿತೀಯ ಪಿಯುಸಿವರೆಗೆ ವಿದ್ಯಾಭ್ಯಾಸ ನಡೆಸಿರುವ ಪೂಜಾಳ ಭವಿಷ್ಯದ ಕನಸುಗಳು ಕಿಡ್ನಿ ವೈಫಲ್ಯದಿಂದ ಕಮರಿದೆ. ಅಧಿಕ ರಕ್ತದೊತ್ತಡ ಹಿನ್ನಲೆಯಲ್ಲಿ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ವೈದ್ಯರಾದ ಡಾ| ಅಮಿತ್ ಡಿಸಿಲ್ವಾ ಅವರ ಬಳಿ ಚಿಕಿತ್ಸೆಗೆ ಹೋದಾಗ ಪೂಜಾಳ ಕಿಡ್ನಿ ಸಂಪೂರ್ಣ ನಿಷ್ಕ್ರಿಯಗೊಂಡಿದ್ದು ಕೂಡಲೇ ಡಯಾಲಿಸೀಸ್ ಆರಂಭಿಸುವಂತೆ ಸೂಚಿಸಿದ್ದಾರೆ. ಡಯಾಲಿಸೀಸ್ ಗೆ ತಿಂಗಳಿಗೆ 25 ಸಾವಿರ ರೂಪಾಯಿ ಖರ್ಚು ಉಂಟಾಗುತ್ತಿದ್ದು, ಕಿಡ್ನಿ ಕಸಿ ಮಾಡಲು ಸುಮಾರು 15 ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

Also Read  ಕಡಬ: ದನಗಳ ಮೇಲೆ ದಾಳಿ ಮಾಡಿದ ಚಿರತೆ - ಆತಂಕದಲ್ಲಿ ಐತ್ತೂರು ಗ್ರಾಮಸ್ಥರು

ಆದರೆ ಅಷ್ಟೊಂದು ಮೊತ್ತವನ್ನು ಅಕೆ ಸಂಪಾದಿಸುವುದು ಅಸಾಧ್ಯವೇ ಸರಿ. ತನ್ನವರೆಂದು ಯಾರೂ ಇಲ್ಲದಿದ್ದರೂ ಎಲ್ಲರಂತೆ ಬಾಳಿ ಬೆಳಕಾಗಬೇಕಾಗಿದ್ದ, ಕಷ್ಟಪಟ್ಟು ಸಾಕಿದ ಅತ್ತೆಗೆ ನೆರವಾಗಬೇಕಿದ್ದ ಹಾಗೂ ಆ ಮನೆಯ ಬೆಳಕಾಗಬೇಕಿದ್ದ ಯುವತಿಯು ಇದೀಗ ಸಹಾಯದ ಅಪೇಕ್ಷೆಯೊಂದಿಗೆ ಸಹೃದಯ ಸಮಾಜದ ಮುಂದೆ ನಿಂತಿದ್ದಾಳೆ. ನೆರವಾಗಬೇಕಾದ ಧರ್ಮ ಸಮಾಜದ್ದು. ನೆರವಾಗಲು ಇಚ್ಛಿಸುವವರು ಪೂಜಾ ಪೂಜಾರಿ ಅವರ ಮನೆಯವರ ಮೊಬೈಲ್ ಸಂಖ್ಯೆ 9920670402 ಯನ್ನು ಸಂಪರ್ಕಿಸಬಹುದು.

Also Read  ಎಣ್ಮೂರು ಶ್ರೀ ನಾಗಬ್ರಹ್ಮ ಆದಿ ಬೈದೇರುಗಳ ಗರಡಿ

ಬ್ಯಾಂಕ್ ಖಾತೆ :
Bank : Canara Bank
Name : Pooja Poojari
A/c No : 0646101013190
Ifsc code : CNRB0000646

error: Content is protected !!
Scroll to Top