ಹಿಜಾಬ್ ಸರಿಯಾಗಿ ಧರಿಸದಿದ್ದಲ್ಲಿ 10 ವರ್ಷ ಜೈಲು ಶಿಕ್ಷೆ

(ನ್ಯೂಸ್ ಕಡಬ) newskadaba.com ಇರಾನ್​, ಸೆ. 14. ಹೆಣ್ಣುಮಕ್ಕಳು ಹಿಜಾಬ್​ ಸರಿಯಾಗಿ ಧರಿಸದಿದ್ದರೆ ಅವರಿಗೆ 60 ಛಡಿ ಏಟು ಹಾಗೂ 10 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸುವ ಲಿಂಗ ಭೇದ ಮಸೂದೆಯನ್ನು ಜಾರಿಗೆ ತರಲು ಇರಾನ್ ಸರಕಾರ ಮುಂದಾಗಿದೆ.

ಇರಾನ್ ​ನಲ್ಲಿ ಹೆಣ್ಣುಮಕ್ಕಳು ಸಾರ್ವಜನಿಕವಾಗಿ ಕಡ್ಡಾಯವಾಗಿ ಹಿಜಾಬ್ ಧರಿಸಲೇಬೇಕು, ಇಲ್ಲದಿದ್ದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಜೈಲು ಶಿಕ್ಷೆ ವಿಧಿಸಲಾಗುತ್ತದೆ, ಇದು ಕೊಲೆ ಮತ್ತು ಮಾದಕವಸ್ತು ಕಳ್ಳಸಾಗಣೆಯಷ್ಟೇ ಗಂಭೀರ ಅಪರಾಧ ಎಂದು ಪರಿಗಣಿಸಲಾಗಿದೆ.

Also Read  ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ - ದಕ್ಷಿಣ ಕನ್ನಡ ಪ್ರಥಮ, ಗದಗ ಜಿಲ್ಲೆಗೆ ಕೊನೆಯ ಸ್ಥಾನ

error: Content is protected !!
Scroll to Top