ಕಾರುಗಳಲ್ಲಿ 6 ಏರ್ ಬ್ಯಾಗ್ ಕಡ್ಡಾಯವಲ್ಲ – ಸಚಿವ ನಿತಿನ್ ಗಡ್ಕರಿ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 14. ಇನ್ನುಮುಂದೆ ಕಾರುಗಳಲ್ಲಿ ಕಡ್ಡಾಯವಾಗಿ 6 ಏರ್‌ ಬ್ಯಾಗ್‌ ಇರಲೇಬೇಕೆಂದು ಕಂಪೆನಿಗಳಿಗೆ ನಿಯಮ ಹೇರುವುದಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಕಳೆದ ವರ್ಷ ಕೇಂದ್ರ ಸರಕಾರ ಹಾಲಿ ವರ್ಷದ ಅಕ್ಟೋಬರ್‌ ಒಳಗಾಗಿ ಕಾರುಗಳಲ್ಲಿ ಆರು ಏರ್‌ಬ್ಯಾಗ್‌ಗಳು ಇರಬೇಕು ಎಂದು ಸೂಚಿಸಿತ್ತು. ಆದರೆ ಇನ್ನುಮುಂದೆ ಕಾರುಗಳಲ್ಲಿ ಕಡ್ಡಾಯವಾಗಿ 6 ಏರ್‌ ಬ್ಯಾಗ್‌ ಇರಲೇಬೇಕು ಎಂಬ ಬಗ್ಗೆ ಕಂಪೆನಿಗಳಿಗೆ ನಿಯಮ ಹೇರುವುದಿಲ್ಲ ಎಂದರು. ಇನ್ನು 2021 ಎ.1ರಿಂದ ಮೊದಲ 2 ಸೀಟುಗಳಿಗೆ ಏರ್‌ಬ್ಯಾಗ್‌ ಕಡ್ಡಾಯಗೊಳಿಸಲಾಗಿತ್ತು ಎಂದು ತಿಳಿಸಿದ್ದಾರೆ.

Also Read  ಹೆಂಡತಿಯನ್ನು ಕೊಂದು ಹೂತು; ತರಕಾರಿ ಗಿಡ ಬೆಳೆಸಿದ್ದ ಕಿರಾತಕ ➤ ಆರೋಪಿ ಅರಸ್ಟ್..!

error: Content is protected !!
Scroll to Top