ಸೆ. 23ರಂದು ಹಿರಿಯ ನಾಗರಿಕರಿಗೆ ಕ್ರೀಡಾಕೂಟ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 13. ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಜಿಲ್ಲಾಮಟ್ಟದಲ್ಲಿ ಹಿರಿಯ ನಾಗರಿಕ ಇಲಾಖೆಯಿಂದ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಸೆ. 23ರಂದು ಬೆಳಿಗ್ಗೆ 9 ಗಂಟೆಗೆ ಕರ್ನಾಟಕ ಎಜುಕೇಶನ್ ಸೊಸೈಟಿ ಕೆಸೆಸ್ ಕಾಂಪೌಂಡ್ ಬಲ್ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಸ್ಪರ್ಧೆಗಳು ಇಂತಿವೆ: 60ರಿಂದ 69 ವರ್ಷ ವಯೋಮಿತಿಯ ಪುರುಷರಿಗೆ 200 ಮೀ. ನಡಿಗೆ ಮತ್ತು ರಿಂಗ್ ಬಗೆಟ್‍ನಲ್ಲಿ ಎಸೆಯುವುದು ಮತ್ತು ಮ್ಯೂಸಿಕಲ್ ಚೇರ್. 70ರಿಂದ 79 ವರ್ಷ ವಯೋಮಿತಿಯವರಿಗೆ 100 .ಮೀ ನಡಿಗೆ ಮತ್ತು ರಿಂಗ್ ಬಕೆಟ್‍ನಲ್ಲಿ ಎಸೆಯುವುದು ಮತ್ತು ಮ್ಯೂಸಿಕಲ್ ಚೇರ್. 80 ವರ್ಷ ಮೇಲ್ಪಟ್ಟವರಿಗೆ 75 ಮೀಟರ್ ನಡಿಗೆ ಮತ್ತು ರಿಂಗ್ ಬಕೆಟ್‍ನಲ್ಲಿ ಎಸೆಯುವುದು ಮತ್ತು ಮ್ಯೂಸಿಕಲ್ ಚೇರ್.

ಮಹಿಳೆಯರಿಗೆ:- 60ರಿಂದ 69 ವರ್ಷ ವಯೋಮಿತಿಯವರಿಗೆ 400 ಮೀ. ನಡಿಗೆ ಮತ್ತು ರಿಂಗ್ ಬಕೆಟ್‍ನಲ್ಲಿ ಎಸೆಯುವುದು ಮತ್ತು ಮ್ಯೂಸಿಕಲ್ ಚೇರ್. 70ರಿಂದ 79ವರ್ಷ ವಯೋಮಿತಿಯವರಿಗೆ 200 ಮೀ. ನಡಿಗೆ ಮತ್ತು ರಿಂಗ್ ಬಕೆಟ್‍ಗೆ ಎಸೆಯುವುದು ಮತ್ತು ಮ್ಯೂಸಿಕಲ್ ಚೇರ್, ಹಾಗೂ 80ವರ್ಷ ಮೇಲ್ಪಟ್ಟವರಿಗೆ 100 ಮೀ. ನಡಿಗೆ ಮತ್ತು ರಿಂಗ್  ಬಕೆಟ್‍ಗೆ  ಎಸೆಯುವುದು ಮತ್ತು ಮ್ಯೂಸಿಕಲ್ ಚೇರ್.

Also Read  ಪುತ್ತೂರು: ಕೋಟಿ ಚೆನ್ನಯ್ಯರ ತಾಯಿ, ದೇಯಿಬೈದೇತಿಗೆ ಅವಮಾನ ► ಬೃಹತ್ ಪಾದಯಾತ್ರೆಗೆ ಚಾಲನೆ

ಪುರುಷರಿಗೆ ಮತ್ತು ಮಹಿಳೆಯರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು- 60ರಿಂದ 79 ವರ್ಷ, 70ರಿಂದ 79 ವರ್ಷ ಮತ್ತು 80ವರ್ಷ ಮೇಲ್ಪಟ್ಟ ವಯೋಮಿತಿಯವರಿಗೆ ಏಕ ಪಾತ್ರ ಅಭಿನಯ, ಗಾಯನ ಸ್ಪರ್ಧೆ ಹಾಗೂ ಚಿತ್ರಕಲೆ. ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುವ ಹಿರಿಯ ನಾಗರಿಕರು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ. ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸುವ ಹಿರಿಯ ನಾಗರಿಕರು ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ. ಅಕ್ಟೋಬರ್ 1ರ ವಿಶ್ವ ಹಿರಿಯ ನಾಗರೀಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಗುವುದು ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣದ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಮಂಗಳೂರು: ನಾಳೆ ದ.ಕ, ಉಡುಪಿ ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ ➤ ಹವಾಮಾನ ಇಲಾಖೆ ಮುನ್ಸೂಚನೆ

error: Content is protected !!
Scroll to Top