ಬೈಕ್ ಗೆ ಕಾರು ಢಿಕ್ಕಿ- ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ. 13. ಕಾರು ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳ – ಕಡೂರು ರಾಷ್ಟ್ರೀಯ ಹೆದ್ದಾರಿಯ ಬಿ.ಕಸ್ಬಾ ಗ್ರಾಮದ ಜಕ್ರಿಬೆಟ್ಟು ಎಂಬಲ್ಲಿ ನಡೆದಿದೆ.

ಗಾಯಗೊಂಡ ಬೈಕ್ ಸವಾರನನ್ನು ತಮಿಳುನಾಡು ಮೂಲದ ವೈವೇಶಪುರಂ ನಿವಾಸಿ ಗೋಪಿನಾಥ್ ಬಿ ಎಂದು ಗುರುತಿಸಲಾಗಿದೆ. ಗೋಪಿನಾಥ್ ಅವರು ಚಿಕ್ಕಪ್ಪನ ‌ಜೊತೆ ಬೈಕ್ ನಲ್ಲಿ ಬಂಟ್ವಾಳದಿಂದ ಮಣಿಹಳ್ಳ ಕಡೆಗೆ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕಾರೊಂದು ಓವರ್ ಟೇಕ್ ಮಾಡುವ ಭರದಲ್ಲಿ ಬೈಕ್ ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಹೆದ್ದಾರಿಗೆ ಮಗುಚಿ ಬಿದ್ದು, ಬೈಕ್ ಸವಾರ ಗೋಪಿನಾಥ್ ಅವರು ಗಾಯಗೊಂಡಿದ್ದಾರೆ. ಕಾರು ಚಾಲಕನ ಅಜಾಗರೂಕತೆಯ ಚಾಲನೆಯೇ  ಘಟನೆಗೆ ಕಾರಣವೆನ್ನಲಾಗಿದೆ.

Also Read  ಸುಳ್ಯ: ಹೃದಯಾಘಾತ- ಯುವಕ ಮೃತ್ಯು

error: Content is protected !!
Scroll to Top