ಅಪ್ರಾಪ್ತೆಯ ವಿವಾಹವಾದ ಗ್ರಾ.ಪಂ ಅಧ್ಯಕ್ಷ- ದೂರು ದಾಖಲು

(ನ್ಯೂಸ್ ಕಡಬ) newskadaba.com ನಂಜನಗೂಡು, ಸೆ. 12. ಅಪ್ರಾಪ್ತೆಯನ್ನು ವಿವಾಹವಾದ ಹಾಡ್ಯ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ್‌ ಕುಮಾರ್‌ ಎಂಬವರ ವಿರುದ್ಧ ನಂಜನಗೂಡು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಬಂಧ ರೈತ ಸಂಘದ ಉಪಾಧ್ಯಕ್ಷ ಮಹೇಶ್‌ ಸೇರಿದಂತೆ ಗ್ರಾಮದ ಪ್ರಮುಖರು ನಂಜನಗೂಡಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು (ಸಿಡಿಪಿಒ) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೀಡಿದ ದೂರಿನ ಮೇರೆಗೆ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಕವಿತಾ ಕ್ರಮ ಕೈಗೊಂಡಿದ್ದಾರೆ. 2023ರ ಫೆಬ್ರವರಿ 15ರಲ್ಲಿ ಅಪ್ರಾಪ್ತೆ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷನ ಮದುವೆ ನಡೆದಿದ್ದು, ಇದೀಗ ಬಾಲಕಿ ಗರ್ಭಿಣಿಯಾಗಿದ್ದಾಳೆ. ಶಾಲಾ ದಾಖಲಾತಿ ಪ್ರಕಾರ ಬಾಲಕಿಯ ಜನ್ಮ ದಿನಾಂಕವು 2005ರ ಮೇ 19 ಆಗಿದ್ದು ಆಕೆಗೆ ಇನ್ನು 18 ವರ್ಷ ತುಂಬದ ಹಿನ್ನಲೆಯಲ್ಲಿ ಅಧ್ಯಕ್ಷ ಹರೀಶ್‌ ಕುಮಾರ್‌ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.

Also Read  ನಿರ್ಮಾಪಕ ದಿನೇಶ್ ಗಾಂಧಿ ಹೃದಯಾಘಾತದಿಂದ ನಿಧನ

error: Content is protected !!
Scroll to Top