ಉಳ್ಳಾಲದ ವ್ಯಕ್ತಿ ವಿಟ್ಲದಲ್ಲಿ ಆತ್ಮಹತ್ಯೆಗೆ ಶರಣು

(ನ್ಯೂಸ್ ಕಡಬ) newskadaba.com ಉಳ್ಳಾಲ, ಸೆ. 12. ಉಳ್ಳಾಲದ ವ್ಯಕ್ತಿಯೋರ್ವ ಬಂಟ್ವಾಳದ ತನ್ನ ಪತ್ನಿ ಮನೆಯಲ್ಲಿ ಆತ್ಮಹತ್ಯೆಗೈದ ಘಟನೆ ವರದಿಯಾಗಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಉಳ್ಳಾಲ ತಾಲೂಕು ಕೊಂಡಾಣ ಮಿತ್ರನಗರ ನಿವಾಸಿ ರವೀಂದ್ರ (35) ಎಂದು ಗುರುತಿಸಲಾಗಿದೆ. ರವೀಂದ್ರ ಅವರು ಭಾನುವಾರದಂದು ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಪಚ್ಚಿನಡ್ಕದ ಪತ್ನಿಯ ಮನೆಗೆ ತೆರಳಿದ್ದು ಮದ್ಯಾಹ್ನ 12 ಗಂಟೆಗೆ ತನ್ನ ಪತ್ನಿ ಮತ್ತು ಮಗುವನ್ನು ಸಂಬಂಧಿಕರ ಶುಭ ಕಾರ್ಯಕ್ಕೆ ಬಿಟ್ಟು ಮತ್ತೆ ಪತ್ನಿಯ ಮನೆಗೆ ವಾಪಸ್ಸಾಗಿದ್ದರು. ಸಂಜೆ ಪತ್ನಿ ಮೊಬೈಲ್ ಕರೆ ಮಾಡಿದಾಗ ರವೀಂದ್ರ ಅವರು ಸ್ವೀಕರಿಸಿರಲಿಲ್ಲ. ಗಾಬರಿಗೊಂಡ ಪತ್ನಿ ನೆರೆಮನೆಯವರಲ್ಲಿ ವಿಚಾರಿಸಿದ್ದು, ಅವರು ಮನೆ ಕಡೆ ತೆರಳಿದಾಗ ಚಾವಡಿಯ ಪಕ್ಕಾಸಿಗೆ ನೇಣು ಬಿಗಿದು ಆತ್ಮ ಹತ್ಯೆಗೈದ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತು ಬಂಟ್ವಾಳ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read 

error: Content is protected !!
Scroll to Top