(ನ್ಯೂಸ್ ಕಡಬ) newskadaba.com ಲಿಬಿಯಾ, ಸೆ. 12. ಉತ್ತರ ಆಫ್ರಿಕಾದ ಲಿಬಿಯಾದಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ 2,000 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಲಿಬಿಯಾ ಪ್ರಧಾನಿ ಒಸಾಮಾ ಹಮದ್ ತಿಳಿಸಿದ್ದಾರೆ.
ಸುಮಾರು 5-6 ಸಾವಿರ ಜನರು ನಾಪತ್ತೆಯಾಗಿದ್ದಾರೆ. ಮೆಡಿಟರೇನಿಯನ್ ಸಮುದ್ರದಲ್ಲಿ ಡೇನಿಯಲ್ ಚಂಡಮಾರುತವು ಈ ಅನಾಹುತಕ್ಕೆ ಕಾರಣವಾಗಿದೆ. ಪ್ರಮುಖವಾಗಿ ‘ಡೆರ್ನಾ’ ನಗರದ ಬಳಿ ಜಲಾಶಯಗಳು ಹೆಚ್ಚಾಗಿದ್ದು, ಭಾರೀ ಪ್ರವಾಹ ಉಂಟಾಗಿ ಹೆಚ್ಚಿನ ಸಂಖ್ಯೆಯ ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.