(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 07. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ್ದ 70 ಲಕ್ಷ ಮಹಿಳೆಯರ ಖಾತೆಗೆ ಇನ್ನೂ ಹಣ ಜಮೆ ಆಗಿಲ್ಲ ಎನ್ನಲಾಗಿದೆ.
ಆಗಸ್ಟ್ 30 ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗೃಹಲಕ್ಷ್ಮೀ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದ್ದರು. ಈವರೆಗೆ 44.52 ಲಕ್ಷ ಫಲಾನುಭವಿಗಳ ಖಾತೆಗೆ ಮಾತ್ರ 2,000 ರೂ.ಹಣ ಜಮಾ ಆಗಿದ್ದು, 69.05 ಲಕ್ಷ ಫಲಾನುಭವಿಗಳ ಖಾತೆಗೆ ಇನ್ನೂ ಹಣ ಸೇರಿಲ್ಲ. ಶೀಘ್ರವೇ ಇವರಿಗೂ ಹಣ ಜಮೆ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ್ದರೂ ಆಧಾರ್, ಬ್ಯಾಂಕ್ ಕೆವೈಸಿ ಮಾಡದೇ ಇರುವವರಿಗೆ ಈ ತಿಂಗಳೂ ಹಣ ವರ್ಗಾವಣೆ ಮಾಡುವುದು ಅನುಮಾನ ಎನ್ನಲಾಗಿದ್ದು, ಕೂಡಲೇ ಫಲಾನುಭವಿಗಳು ಈ ಕೆಲಸಗಳನ್ನು ಸಂಪೂರ್ಣ ಮಾಡಿ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು ಎನ್ನಲಾಗಿದೆ.