15ರ ಬಾಲಕನಿಗೆ ಸರ್ಪಕಾಟ – ಎರಡು ತಿಂಗಳ ಅವಧಿಯಲ್ಲಿ 9 ಬಾರಿ ಕಚ್ಚಿದ ನಾಗಪ್ಪ

(ನ್ಯೂಸ್ ಕಡಬ) newskadaba.com ಕಲಬುರಗಿ, ಆ. 30. ಹಾವಿನ ದ್ವೇಷ ಹನ್ನೆರಡು ವರುಷ ಅನ್ನೋ ಮಾತು. ಅದರ ಪ್ರಕಾರ ನಾಗರಹಾವು ತನ್ನ ಸೇಡು ತೀರೋವರೆಗೂ ಬಿಡೋದಿಲ್ಲ ಅಂತಾರೆ. ಇದೇ ರೀತಿಯ ಘಟನೆಯೊಂದು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ನಡೆದಿದೆ.


ಹಲಕರ್ಟಿ ಗ್ರಾಮದ ವಿಜಯ್‌ ಕುಮಾರ್ ಹಾಗೂ ಉಷಾ ದಂಪತಿಯ ಪುತ್ರ 15 ವರ್ಷದ ಪ್ರಜ್ವಲ್‌ 9ನೇ ತರಗತಿಯಲ್ಲಿ ಓದುತ್ತಿದ್ದು, ಈತನಿಗೆ 2 ತಿಂಗಳ ಅವಧಿಯಲ್ಲಿ 9 ಬಾರಿ ನಾಗರಹಾವು ಕಚ್ಚಿದೆ. ಹಾವಿನ ಕಾಟದಿಂದ ಬೇಸತ್ತಿರುವ ಬಾಲಕನ ಕುಟುಂಬ ಸರ್ಪದೋಷ ಇರಬಹುದು ಎನ್ನುವ ಕಾರಣಕ್ಕೆ ಮನೆಯನ್ನು ಕೂಡಾ ತೊರೆದಿದ್ದರು.

Also Read  ಬೆಳ್ತಂಗಡಿ: ವಿದ್ಯುತ್ ಪ್ರವಾಹಿಸಿ ಓರ್ವ ಮೃತ್ಯು ➤ ಇಬ್ಬರಿಗೆ ಗಾಯ


ಜುಲೈ 3 ರಂದು ಮೊದಲ ಬಾರಿಗೆ ತನಗೆ ಹಾವು ಕಡಿದಿತ್ತು. ಅಲ್ಲಿಂದ ಇಲ್ಲಿಯವರೆಗೂ 9 ಬಾರಿ ಹಾವು ತನಗೆ ಕಚ್ಚಿದೆ ಎಂದು ಪ್ರಜ್ವಲ್‌ ಹೇಳಿಕೊಂಡಿದ್ದಾರೆ. ಇನ್ನು ಪ್ರಜ್ವಲ್‌ನ ಪೋಷಕರು ಹಾವಿನಿಂದ ಮುಕ್ತಿ ಕೊಡಿಸುವಂತೆ ದೇವರ ಮೊರೆ ಹೋಗಿದ್ದಾರೆ.

error: Content is protected !!
Scroll to Top