ಆಸ್ತಿ ವಿಚಾರಕ್ಕೆ ಅಣ್ಣ- ಅತ್ತಿಗೆಯ ಬರ್ಬರ ಕೊಲೆಗೈದ ಸಹೋದರ

(ನ್ಯೂಸ್ ಕಡಬ) newskadaba.com ಮೈಸೂರು, ಆ. 30. ಆಸ್ತಿ ವಿಚಾರವಾಗಿ ಸಹೋದರನೋರ್ವ ಅಣ್ಣ- ಅತ್ತಿಗೆಯ ಬರ್ಬರ ಕೊಲೆಗೈದ ಘಟನೆ ಜಿಲ್ಲೆಯ ನರಸೀಪುರ ತಾಲೂಕಿನ ನುಗ್ಗಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಕೊಲೆಯಾದವರನ್ನು ಶಿವಲಿಂಗೇಗೌಡ ಹಾಗೂ ಪತ್ನಿ ಭಾರತಿ ಎಂದು ಗುರುತಿಸಲಾಗಿದೆ. ಆರೋಪಿ ಸಹೋದರ ಹನುಮಂತೇಗೌಡ ಎಂಬಾತ ಕೊಲೆ ಕೃತ್ಯವೆಸಗಿದ್ದಾನೆ. ಆಸ್ತಿ ವಿಚಾರಕ್ಕೆ ಸಹೋದರರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಶಿವಲಿಂಗೇಗೌಡ ಮತ್ತು ಭಾರತಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆರೋಪಿ ಹನುಮಂತೇಗೌಡ, ಅಣ್ಣ ಅತ್ತಿಗೆ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ. ಘಟನಾ ಸ್ಥಳಕ್ಕೆ ಬನ್ನೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿ ಹನುಮಂತೆಗೌಡನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಉಚಿತ ಬಸ್ ಪ್ರಯಾಣಕ್ಕೆ ಒರಿಜಿನಲ್ ಐಡಿ ಬೇಕಿಲ್ಲ ➤ ಸಾರಿಗೆ ಇಲಾಖೆಯಿಂದ‌ ಪರಿಷ್ಕೃತ ಆದೇಶ

error: Content is protected !!
Scroll to Top