ಟಿಕೆಟ್ ರಹಿತ ಪ್ರಯಾಣ – 2,832 ಪ್ರಯಾಣಿಕರಿಗೆ ದಂಡ ವಿಧಿಸಿದ ಕೆಎಸ್ಸಾರ್ಟಿಸಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 29. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ತನಿಖಾ ತಂಡಗಳು ನಿಗಮ ವ್ಯಾಪ್ತಿಯಲ್ಲಿ ಜುಲೈ ತಿಂಗಳಲ್ಲಿ ಟಿಕೆಟ್‌ ರಹಿತವಾಗಿ ಪ್ರಯಾಣಿಸಿದ ಕಾರಣ 2,832 ಪ್ರಯಾಣಿಕರಿಗೆ ದಂಡ ವಿಧಿಸಿರುವ ಕುರಿತು ವರದಿಯಾಗಿದೆ.


ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಕೆಎಸ್‌ಆರ್‌ಟಿಸಿ, ನಿಗಮದ ತನಿಖಾ ತಂಡಗಳು ತಪಾಸಣಾ ಕಾರ್ಯವನ್ನು ಕೈಗೊಂಡು ಒಟ್ಟು 2,832 ಪ್ರಯಾಣಿಕರಿಗೆ ದಂಡ ವಿಧಿಸಿರುವುದಾಗಿ ಹೇಳಿದೆ. ಇದರ ಪ್ರಕಾರ, ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ 43,698 ವಾಹನಗಳನ್ನು ತನಿಖೆಗೊಳಪಡಿಸಿ, ಅವುಗಳ ಪೈಕಿ 2,832 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. ಅದರಂತೆ ಟಿಕೆಟ್‌ ರಹಿತ ಪ್ರಯಾಣಿಕರಿಂದ 4,46,853 ರೂ. ದಂಡವನ್ನು ವಸೂಲಿ ಮಾಡಲಾಗಿದೆ ಎಂದು ತಿಳಿಸಿದೆ. ಇನ್ನುಮುಂದೆ ಪ್ರಯಾಣಿಕರು ಬಸ್ಸಿನಲ್ಲಿ ಪ್ರಯಾಣಿಸುವಾಗ ಸರಿಯಾದ ಟಿಕೆಟ್‌/ ಪಾಸ್‌ ಪಡೆದು ಪ್ರಯಾಣ ಮಾಡುವಂತೆ ನಿಗಮ ಮನವಿ ಮಾಡಿದೆ.

Also Read  ಕಡಬ ತಾಲೂಕಿನ 2 ಸರಕಾರಿ ಶಾಲೆಗಳಿಗೆ ಆಂಗ್ಲ ಮಾಧ್ಯಮ ಭಾಗ್ಯ

error: Content is protected !!
Scroll to Top