ಅಪರಿಚಿತ ವ್ಯಕ್ತಿಯ ಪತ್ತೆಗೆ ಕೋರಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 28. ಪಣಂಬೂರು ಐಓಸಿಎಲ್ ಕಂಪನಿಯ ಹಿಂಭಾಗದ ಕಡಲ ಕಿನಾರಿಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಹರೆ ವಿವರ: ಪ್ರಾಯ ಸುಮಾರು 27 ರಿಂದ 30 ವರ್ಷ, ಕಪ್ಪು ಮೈಬಣ್ಣ, ಕಪ್ಪು ತಲೆ ಕೂದಲು, ಸಾಧಾರಣ ಶರೀರ ಹೊಂದಿರುತ್ತಾರೆ. ಮೃತ ಶರೀರದ ಮೇಲೆ ನೀಲಿ ತಿಳಿ ಹಸಿರು ಬಣ್ಣದ ತುಂಬು ತೋಳಿನ ಶರ್ಟ್, ಗಾಢ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಒಳಗೆ ಕಪ್ಪು ಬಣ್ಣದ ಬರ್ಮುಡಾ ಚಡ್ಡಿ ಧರಿಸಿದ್ದು, ಬಲಗೈ ಮಣಿಕಟ್ಟಿಗೆ ಕೆಂಪು ದಾರ ಕಟ್ಟಿದ್ದು, ಜನಿವಾರ  ಧರಿಸಿರುತ್ತಾರೆ. ಮೃತಶರೀರವು ಕೊಳೆತು ಚರ್ಮ ಜಾರಿರುವುದು ಕಂಡು ಬಂದಿರುತ್ತದೆ. ಈ ಅಪರಿಚಿತ ವ್ಯಕ್ತಿಯ ಸಂಬಧಿಕರು ಇದ್ದಲ್ಲಿ ಪಣಂಬೂರು ಪೊಲೀಸ್ ಠಾಣೆಯ ದೂ. ಸಂಖ್ಯೆ 0824-2220530, 9480805335, ಸಿಟಿ ಕಂಟ್ರೋಲ್ ರೂಮ್ 0824-2220800 ಮೂಲಕ ಕರೆ ಮಾಡಿ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಮಗುಚಿಬಿದ್ದ ಮೀನುಗಾರಿಕಾ ದೋಣಿ- 6 ಮಂದಿಯ ರಕ್ಷಣೆ ➤ 15 ಲಕ್ಷ ರೂ. ನಷ್ಟ...!

error: Content is protected !!
Scroll to Top