ಕರಾಟೆ ಸ್ಪರ್ಧೆ- ಸರಸ್ವತೀ ವಿದ್ಯಾಲಯದ ನಿಶ್ಚಿತ್ ಪಿ ರಾಷ್ಟ್ರಮಟ್ಟಕ್ಕೆ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, . 27. ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ಪುಣಚ ವಿದ್ಯಾಸಂಸ್ಥೆ ದೇವಿನಗರ ಇಲ್ಲಿ ಆಯೋಜಿಸಲ್ಪಟ್ಟ ವಿದ್ಯಾಭಾರತಿ ಪ್ರಾಂತ (ರಾಜ್ಯ) ಮಟ್ಟದ ಕರಾಟೆ ಕಿಶೋರ ವರ್ಗ ಬಾಲಕರ (17ರ ವಯೋಮಾನ) 70 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ 9ನೇ ತರಗತಿಯ ನಿಶ್ವಿತ್ ಪಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದು ಮುಂದೆ ಅಕ್ಟೋಬರ್ ತಿಂಗಳಿನಲ್ಲಿ ಮಧ್ಯಪ್ರದೇಶದ ದೇವಾಸ್‌ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.

ಈತನಿಗೆ ಕರಾಟೆ ಶಿಕ್ಷಕರಾದ ಶ್ರೀ ಯಾದವ ಬೀರಂತಡ್ಕ ಹಾಗೂ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಲಕ್ಷ್ಮೀಶ ಗೌಡ ಆರಿಗ ಮಾರ್ಗದರ್ಶನ ನೀಡಿದ್ದಾರೆ. ಈತ ಕಡಬ ತಾಲೂಕಿನ ಪೊನ್ನಂತ್ತೂರು ಶ್ರೀ ಸುರೇಶ್ ಹಾಗೂ ಶ್ರೀಮತಿ ಚಂದ್ರಾವತಿ ದಂಪತಿಯ ಪುತ್ರ.

Also Read  ಸಾಲ ಭಾದೆಗೆ ಸರಳ ಪರಿಹಾರ

error: Content is protected !!
Scroll to Top