ಆನ್ ಲೈನ್ ಸಾಲ- ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಮಣಿಪಾಲ, ಆ. 28. ಆನ್‌ಲೈನ್ ಸಾಲಕ್ಕೆ ಸಂಬಂಧಿಸಿ ಪೋನ್ ಕರೆಗಳಿಂದ ಹೆದರಿ ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲ ಹುಡ್ಕೊ ಕಾಲೋನಿ ಎಂಬಲ್ಲಿ ನಡೆದಿದೆ.


ಆತ್ಮಹತ್ಯೆ ಮಾಡಿಕೊಂಡವರನ್ನು ಶಿವಳ್ಳಿಯ ರಾಘವೆಂದ್ರ ಎ.ಶಾನುಭಾಗ್(49) ಎಂದು ಗುರುತಿಸಲಾಗಿದೆ. ಇವರು ಆನ್‌ ಲೈನ್‌ ಆ್ಯಪ್ ಮೂಲಕ ಸಾಲ ತೆಗೆದುಕೊಂಡಿದ್ದರು. ಅದರಿಂದ ಫೋನ್ ಕರೆಗಳು ಬರುತ್ತಿದ್ದ ಕಾರಣದಿಂದಲೋ ಅಥವಾ ಯಾವ ಕಾರಣಕ್ಕೆ ಮನೆಯ ಮಹಡಿಯ ಮೇಲೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಮಕ್ಕಳ ಬೇರುಗಳಲ್ಲಿಯೇ ಸಂಸ್ಕೃತಿಯನ್ನು ಬೆಳೆಸಿ: ಆಶಾ ಬೆಳ್ಳಾರೆ

error: Content is protected !!
Scroll to Top