ಹಿಂಬಾಗಿಲ ಬೀಗ ಮುರಿದು ಒಳನುಗ್ಗಿದ ಕಳ್ಳರು – ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಆ. 28. ಮನೆಯ ಹಿಂಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವು‌ ಮಾಡಿದ ಘಟನೆ ತಾಲೂಕಿನ ಇರಾ ಎಂಬಲ್ಲಿ ನಡೆದಿದೆ.


ಇರಾ ಗ್ರಾಮದ ನಿವಾಸಿ ಅಬ್ದುಲ್ ಹಮೀದ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು, 1,12,000 ರೂ. ಮೌಲ್ಯದ 4 ಪವನ್ ತೂಕದ ಚಿನ್ನದ ನೆಕ್ಲಸ್, ಹಾಗೂ 11,000 ಸಾವಿರ ರೂ. ನಗದು ಒಟ್ಟು 1.23.000 ರೂ ಮೌಲ್ಯ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಲಾಗಿದೆ.

ಅಬ್ದುಲ್ ಹಮೀದ್ ಅವರು ಆ.26 ರಂದು ರಾತ್ರಿ 9.30 ರ ಬಳಿಕ ಮನೆಗೆ ಬೀಗ ಹಾಕಿ ಅತ್ತೆ ಮನೆಗೆ ಹೋಗಿದ್ದರು. ಮರುದಿನ ಮನೆಗೆ ಬಂದು ‌ನೋಡಿದಾಗ ಹಿಂಬದಿಯ ಬಾಗಿಲು ತೆರೆದಿತ್ತು. ಸಂಶಯದಿಂದ ಮನೆಯೊಳಗೆ ಹೋಗಿ ನೋಡಿದಾಗ ಬೆಡ್ ರೂಮಿನ ಗೊಡ್ರೇಜ್ ನಲ್ಲಿ ಇರಿಸಲಾಗಿದ್ದ ನಗ-ನಗದು ಕಳವಾಗಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಬಂಟ್ವಾಳ ಅಪರಾಧ ವಿಭಾಗದ ಎಸ್. ಐ.ಮೂರ್ತಿ , ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದೆ.

Also Read  ಬೆಳ್ತಂಗಡಿ: ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ➤ 12 ಲಕ್ಷ ಮೌಲ್ಯದ 40 ಪವನ್ ಚಿನ್ನಾಭರಣ ಕಳವು

error: Content is protected !!
Scroll to Top