ಅಕ್ರಮ ಸಾರಾಯಿ ಮಾರಾಟ- ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 28. ಅಕ್ರಮ ಸರಾಯಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಮಂಗಳೂರಿನ ಬಿಜೈ ಬಳಿ ನಡೆದಿದೆ.


ಬಂಧಿತರನ್ನು ಚಿದಾನಂದ ಹಾಗೂ ಸ್ವಾಮಿ ಗೌಡ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ 5,750 ರೂ. ಮೌಲ್ಯದ 90 ಎಮ್ ಎಲ್ ನ 128 ಮದ್ಯದ ಪ್ಯಾಕೇಟ್ ಮತ್ತು 2,500 ರೂ. ನಗದನ್ನು ವಶಕ್ಕೆ ಪಡೆಯಲಾಗಿದ್ದು, ಉರ್ವ ಠಾಣೆಯಲ್ಲಿ ಅಬಕಾರಿ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗಿದೆ.

Also Read  ಸಾರ್ವಜನಿಕ ಶೌಚಾಲಯದಲ್ಲಿ ಅಕ್ರಮ ಮಾಂಸ ಮಾರಾಟ..!

error: Content is protected !!
Scroll to Top