ಮಾತೆಯರು ಸಂಸ್ಕಾರ ವಾಹಕರಾಬೇಕು – ಶ್ರೀ ರವಿಶಂಕರ ನಲ್ಲೂರಾಯ ಸುಬ್ರಹ್ಮಣ್ಯ

(ನ್ಯೂಸ್ ಕಡಬ) newskadaba.com ಕಡಬ, . 27. ಶ್ರೀ ಸರಸ್ವತೀ ವರಮಹಾಲಕ್ಷ್ಮೀ ಪೂಜಾ ಸಮಿತಿ, ವಿದ್ಯಾನಗರ ಕಡಬ ಮತ್ತು ವಿಶ್ವಹಿಂದೂ ಪರಿಷದ್, ಮಾತೃ ಶಕ್ತಿ ದುರ್ಗಾವಾಹಿನಿ, ಕಡಬ ಪ್ರಖಂಡ ಇದರ ಸಹಯೋಗದೊಂದಿಗೆ 6ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಪೂಜೆಯು ಜರುಗಿತು.

ಈ ಕಾರ್ಯಕ್ರಮದಲ್ಲಿ ಶ್ರೀ ರವಿಶಂಕರ ನಲ್ಲೂರಾಯ ಸುಬ್ರಹ್ಮಣ್ಯ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಧಾರ್ಮಿಕ ಉಪನ್ಯಾಸ ನೀಡಿದರು. ಪ್ರೌರಾಣಿಕ ಕಥೆಗಳ ಮೂಲಕ ವ್ರತಾಚರಣೆಯ ಮಹತ್ವವನ್ನು ತಿಳಿಸಿದರು. ಇಂತಹ ವ್ರತಾಚರಣೆ ಕೈಗೊಳ್ಳುವುದರ ಮೂಲಕ ಮಾತೆಯರು ನಮ್ಮ ಸಂಸ್ಕಾರವನ್ನು ಉಳಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸುವಂತಾಗಬೇಕು. ಇಂತಹ ಸಂಸ್ಥೆಯು ಇದಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು. ಸಭಾಧ್ಯಕ್ಷತೆಯನ್ನು ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ರೂಪ ಗುರುಮೂರ್ತಿ ವಹಿಸಿದ್ದರು. ಶ್ರೀ ಭಾರತಿ ಶಿಶುಮಂದಿರದ ವ್ಯವಸ್ಥಾಪಕರಾದ ಶ್ರೀಮತಿ ಸವಿತಾ ಶಿವಸುಬ್ರಹ್ಮಣ್ಯ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಕೃಷ್ಣಶೆಟ್ಟಿ ಕಡಬ, ಸಂಸ್ಥೆಯ ಸಂಚಾಲಕರಾದ ಶ್ರೀ ವೆಂಕಟ್ರಮಣ ರಾವ್ ಮಂಕುಡೆ, ಆಡಳಿತಮಂಡಳಿಯ ಸರ್ವಸದಸ್ಯರು, ಶ್ರೀ ಭಾರತಿ ಶಿಶುಮಂದಿರದ ಸರ್ವಸದಸ್ಯರು, ವರಮಹಾಲಕ್ಷ್ಮೀ ಪೂಜಾ ಸಮಿತಿ ಸರ್ವಸದಸ್ಯರು, ವಿಶ್ವಹಿಂದೂ ಪರಿಷದ್, ಮಾತೃಶಕ್ತಿ, ದುರ್ಗಾವಾಹಿನಿ ಕಡಬ ಪ್ರಖಂಡ ಇದರ ಸರ್ವಸದಸ್ಯರೂ, ಪೋಷಕರು, ವಿಧ್ಯಾಭಿಮಾನಿಗಳು ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

Also Read  ಬೆಳ್ತಂಗಡಿ: ಕೊರೋನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿದ ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡ

error: Content is protected !!
Scroll to Top