ಚಂದ್ರಯಾನ-3 ಯಶಸ್ವಿ; ಸಂಭ್ರಮಾಚರಣೆ

(ನ್ಯೂಸ್ ಕಡಬ) newskadaba.com ಕಡಬ, . 24. ಸರಸ್ವತೀ ವಿದ್ಯಾಲಯ ಪ್ರೌಢಶಾಲೆ ಹಾಗೂ ಸರಸ್ವತೀ ಆಂಗ್ಲಮಾಧ್ಯಮ ಶಾಲೆ ಜಂಟಿಯಾಗಿ ಚಂದ್ರಯಾನ-3ರ ಯಶಸ್ವಿ ಸಂಭ್ರಮಾಚರಣೆಯನ್ನು ಆಗಸ್ಟ್ 24ರಂದು ಸಂಸ್ಥೆಯ ಸಭಾಂಗಣದಲ್ಲಿ ಆಚರಿಸಿತು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರೂ, ಪ್ರೌಢವಿಭಾಗದ ಮೇಲ್ವಿಚಾಲಕರಾದ ಶ್ರೀಮತಿ ಪುಲಸ್ಯ ರೈ ವಹಿಸಿ ಯಶಸ್ವಿ ಕೆಲಸಕ್ಕೆ ಭಗವಂತನನ್ನು ಆರಾಧಿಸುವುದು ಮುಖ್ಯ. ಇಂತಹ ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ. ಇಸ್ರೋದಲ್ಲಿ ದುಡಿಯುತ್ತಿರುವ ಎಲ್ಲಾ ಹಂತದ ನೌಕರವೃಂದ, ಅಧ್ಯಕ್ಷರೂ, ಆಡಳಿತ ಮಂಡಳಿಯ ಸದಸ್ಯರಿಗೆ, ರಾತ್ರಿ ಹಗಲೆನ್ನದೇ ದುಡಿಯುವ ವಿಜ್ಞಾನಿಗಳಿಗೆ ಅವರ ಕುಟುಂಬಕ್ಕೆ ಭಗವಂತನು ಉತ್ತಮ ಆರೋಗ್ಯ ಭವಿಷ್ಯವನ್ನು ಕರುಣಿಸಲಿ ಎಂದು ಈ ಸಂದರ್ಭದಲ್ಲಿ ಶುಭಹಾರೈಸಿದರು.

Also Read  ಮಂಗಳೂರು: ನಕಲಿ ನೋಟಿನಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಬರಹ...! ➤ ದೇವಸ್ಥಾನದ ಹುಂಡಿಯಲ್ಲಿ ನೋಟಿನ ಜೊತೆಗೆ ಬಳಸಿದ ಕಾಂಡೋಮ್ ಹಾಕಿ ವಿಕೃತಿ ಮೆರೆದ ಪಾಪಿಗಳು

ವೇದಿಕೆಯಲ್ಲಿ ಭಾರತೀಯ ಮಜ್ದೂರು ಸಂಘದ ಕಾರ್ಯದರ್ಶಿ, ಪೋಷಕರೂ ಆಗಿರುವ ಶ್ರೀ ಉದಯ ಪೂವಳ, ಪ್ರೌಢವಿಭಾಗದ ಮುಖ್ಯಶಿಕ್ಷಕಿ ಶ್ರೀಮತಿ ಶೈಲಶ್ರೀ ರೈ ಎಸ್, ಆಂಗ್ಲಮಾಧ್ಯಮ ವಿಭಾಗದ ಮುಖ್ಯಶಿಕ್ಷಕಿ ಶ್ರೀಮತಿ ಭವ್ಯಶ್ರೀ ಕೆ ಉಪಸ್ಥಿತರಿದ್ದರು. ಆಂಗ್ಲಮಾಧ್ಯಮ ವಿಭಾಗದ ಶಿಕ್ಷಕಿ ಕು.ಶ್ವೇತಾ ಸ್ವಾಗತಿಸಿ, ಪ್ರೌಢವಿಭಾಗದ ಶಿಕ್ಷಕಿ ಕು.ಕಾವ್ಯಶ್ರೀ ಡಿ ವಂದಿಸಿದರು.

error: Content is protected !!
Scroll to Top