ದ್ವಿತೀಯ ಪಿಯುಸಿ ವಿದ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 27. ದ್ವಿತೀಯ ಪಿಯುಸಿ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಕ್ತಿನಗರ ನಾಲ್ಯಪದವಿನಲ್ಲಿ ಸಂಭವಿಸಿದೆ.


ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಹರ್ಷದ್‌ ಕೌಶಲ್‌ (17) ಎಂದು ಗುರುತಿಸಲಾಗಿದೆ. ನಗರದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಈತ ಕರಾಟೆ ಪಟುವೂ ಆಗಿದ್ದ. ಗುರುವಾರದಂದು ಸಂಜೆ ಕಾಲೇಜಿನಿಂದ ಮನೆಗೆ ಬಂದಿದ್ದ ಕೌಶಲ್‌ ಈ ಕೃತ್ಯವೆಸಗಿದ್ದಾನೆ‌. ಇನ್ನು ಮನೆಯಲ್ಲಿ ಕೌಶಲ್‌ ಹಾಗೂ ಅಜ್ಜಿ ಮಾತ್ರ ಇದ್ದು, ತಾಯಿ ಮತ್ತು ತಂದೆ ಕೆಲಸಕ್ಕೆ ಹೋಗಿದ್ದರು. ಸಂಜೆಯ ವೇಳೆ ತಾಯಿ ಕೆಲಸದಲ್ಲಿಂದ ಮಗನಿಗೆ ಕರೆ ಮಾಡಿದ್ದು, ಕೌಶಲ್‌ ಕರೆ ಸ್ವೀಕರಿಸಲಿಲ್ಲ. ತಾಯಿ ಕೂಡಲೇ ಹರ್ಷದ್‌ನ ಅಜ್ಜಿಗೆ ಕರೆ ಮಾಡಿ ತಿಳಿಸಿದ್ದರು. ಬಳಿಕ ಮಹಡಿಯ ಕೋಣೆಯಲ್ಲಿ ಹೋಗಿ ನೋಡಿದಾಗ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಏಕಾಏಕಿ ಕೆಳಗೆ ಬಂತು 19 ಸಾವಿರ ಅಡಿ ಎತ್ತರ ಹಾರುತ್ತಿದ್ದ ವಿಮಾನ              ➤ ತಪ್ಪಿತು ಭಾರೀ ಅಪಘಾತ..!

error: Content is protected !!
Scroll to Top