(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 27. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಫೇಸ್ಬುಕ್ ಪೇಜ್ ಹ್ಯಾಕ್ ಮಾಡಲಾಗಿದ್ದು, ತಕ್ಷಣವೇ ಎಚ್ಚೆತ್ತುಕೊಂಡ ಅವರ ಸಾಮಾಜಿಕ ಜಾಲತಾಣ ನಿರ್ವಹಣಾ ತಂಡವು ಪಾಸ್ವರ್ಡ್ ಹಾಗೂ ಪ್ರೊಫೈಲ್ ಪೋಟೋ ಅನ್ನು ಬದಲಾಯಿಸಿದೆ ಎಂದು ವರದಿಯಾಗಿದೆ.
ಶುಕ್ರವಾರದಂದು ವರಮಹಾಲಕ್ಷ್ಮೀ ಹಬ್ಬದ ಶುಭಾಶಯ ಕೋರಿ ಪೋಸ್ಟ್ ಹಾಕಿದ್ದ ಎಚ್.ಡಿ. ಕುಮಾರಸ್ವಾಮಿ ಅವರ ಖಾತೆಯಲ್ಲಿ ಶನಿವಾರದಂದು ಇದ್ದಕ್ಕಿದ್ದಂತೆ ಅಶ್ಲೀಲ ಚಿತ್ರಗಳು ಹರಿದಾಡಲು ಆರಂಭವಾಗಿತ್ತು ಅಲ್ಲದೇ ಮಹಿಳೆಯರ ನಗ್ನಚಿತ್ರಗಳು, ವೀಡಿಯೋ ಲಿಂಕ್ಗಳಿದ್ದವು. ಕೆಲವರಿಗೆ ಮೆಸೆಂಜರ್ನಲ್ಲಿ ಸಂದೇಶಗಳೂ ರವಾನೆಯಾಗಿವೆ. ಈ ಅಶ್ಲೀಲ ಚಿತ್ರಗಳಿಗೆ ಹಲವರ ಹೆಸರುಗಳು ಟ್ಯಾಗ್ ಆಗಿದ್ದು, ಎಚ್ಡಿಕೆ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುವ ತಂಡದ ಗಮನಕ್ಕೆ ಈ ವಿಚಾರ ತಲುಪುವಷ್ಟರಲ್ಲಿ ಹಲವರ ಖಾತೆಗಳಿಗೆ ಫೋಟೋ, ವೀಡಿಯೋ, ಲಿಂಕ್ಗಳು ಶೇರ್ ಆಗಿದ್ದವು ಎನ್ನಲಾಗಿದೆ.