ಬಿಜೆಪಿ ಸಂಸದನ ಮನೆಯಲ್ಲಿ ಬಾಲಕನ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಅಸ್ಸಾಂ, ಆ. 27. ಬಿಜೆಪಿ ಸಂಸದ ರಾಜದೀಪ್ ರಾಯ್ ಅವರ ನಿವಾಸದಲ್ಲಿ 10 ವರ್ಷದ ಬಾಲಕನ ಮೃತದೇಹವೊಂದು ಕುತ್ತಿಗೆಗೆ ಬಟ್ಟೆ ಬಿಗಿದ ರೀತಿಯಲ್ಲಿ ಪತ್ತೆಯಾಗಿದೆ ಎಂದು ಕ್ಯಾಚಾರ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಬ್ರತಾ ಸೇನ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಧೋಲೈ ಪ್ರದೇಶದವರಾದ ಬಾಲಕನ ತಾಯಿ ಸಿಲ್ಚಾರ್‌ ನಲ್ಲಿರುವ ಬಿಜೆಪಿ ನಾಯಕನ ಮನೆಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಮನೆಗೆಲಸ ಮಾಡಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಮನೆ ಕೆಲಸದಾಕೆಯ ಮಗ ನೇಣು ಬಿಗಿದುಕೊಂಡಿರುವ ಕುರಿತು ಕರೆ ಬಂದಿತ್ತು ಕೂಡಲೇ ಮನೆಗೆ ಬಂದು ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ವೇಳೆ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ರಾಜ್‌ದೀಪ್‌ ಹೇಳಿಕೆ ನೀಡಿದ್ದಾರೆ.

Also Read  ಭಾಸ್ಕರ್‌ ಶೆಟ್ಟಿ ಹತ್ಯೆ ಪ್ರಕರಣ ➤ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್.!!

error: Content is protected !!
Scroll to Top