ಖಾಸಗಿ ಶಾಲೆಗೆ ಮಕ್ಕಳನ್ನು ಕಳುಹಿಸುವ ಪೋಷಕರಿಗೆ ಸಿಹಿ ಸುದ್ದಿ ► ಫೆ.20 ರಿಂದ ಉಚಿತ ಶಿಕ್ಷಣಕ್ಕಾಗಿ RTE ಕಾಯ್ದೆಯಡಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.07. ಶಿಕ್ಷಣ ಹಕ್ಕು ಕಾಯ್ದೆಯಡಿ ಮಕ್ಕಳನ್ನು ಶಾಲೆಗೆ ಸೇರಿಸಲು ಬಯಸುವ ಪೋಷಕರಿಗೆ ಫೆಬ್ರವರಿ 20 ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ.

2018-19 ನೇ ಸಾಲಿನಲ್ಲಿ RTE ಅಡಿ ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ 1.44 ಲಕ್ಷ ಸೀಟುಗಳನ್ನು ಕಾಯ್ದಿರಿಸಲಾಗಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಶೇ.25 ರಷ್ಟು ಸೀಟುಗಳಿಗೆ ಉಚಿತವಾಗಿ ಪ್ರವೇಶ ನೀಡುವ ಬಗ್ಗೆ ಆರ್ ಟಿಇ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇದೇ ಫೆಬ್ರವರಿ 20 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಮಾರ್ಚ್ 21 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಏಪ್ರಿಲ್ 2 ರಂದು ಲಾಟರಿ ಪ್ರಕ್ರಿಯೆ ಅರ್ಹತಾ ಸುತ್ತಿನ ಪಟ್ಟಿ ಪ್ರಕಟವಾಗಲಿದೆ. ಎಪ್ರಿಲ್ 06 ರಂದು ಮೊದಲ ಸುತ್ತಿನ ಸೀಟು ಹಂಚಿಕೆ ಮಾಡಲಾಗುತ್ತದೆ. ಏಪ್ರಿಲ್ 07 ರಿಂದ 17 ರವರೆಗೆ ಮೊದಲ ಸುತ್ತಿನ ದಾಖಲಾತಿ ನಡೆಯಲಿದೆ.

ಏಪ್ರಿಲ್ 26 ರಂದು 02 ನೇ ಸುತ್ತಿನ ಸೀಟು ಹಂಚಿಕೆ ನಡೆಯಲಿದೆ. ಏಪ್ರಿಲ್ 27 ರಿಂದ ಮೇ 05 ರವರೆಗೆ 02 ನೇ ಸುತ್ತಿನ ದಾಖಲಾತಿ ನಡೆಯಲಿದೆ. ಮೇ 14 ರಂದು 03 ನೇ ಸುತ್ತಿನ ಸೀಟು ಹಂಚಿಕೆ ಮಾಡಲಿದ್ದು, ಮೇ 16 ರಿಂದ 22 ರವರೆಗೆ 03 ನೇ ಸುತ್ತಿನ ದಾಖಲಾತಿ ನಡೆಯಲಿದೆ. ಪೋಷಕರು ಫೆಬ್ರವರಿ 20 ರಿಂದ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಮಗು, ಪೋಷಕರ ಆಧಾರ್ ಕಾರ್ಡ್ ಇರಬೇಕು. ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಉಚಿತವಾಗಿ ಸರ್ಜಿ ಸಲ್ಲಿಸಬಹುದಾಗಿದೆ.

error: Content is protected !!

Join the Group

Join WhatsApp Group