ರಸ್ತೆ ಅಪಘಾತ- ಠಾಣೆಯ ಕಾವಲು ಕಾಯುತ್ತಿದ್ದ ನಾಯಿ ಮೃತ್ಯು; ಕಣ್ಣೀರು ಹಾಕಿದ ಠಾಣಾ ಸಿಬ್ಬಂದಿಗಳು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಆ. 27. ಪೊಲೀಸ್ ಠಾಣೆಯ ಕಾವಲು ಕಾಯುತ್ತಿದ್ದ ‘ಬೊಗ್ಗಿ’ ಹೆಸರಿನ ನಾಯಿಯೊಂದು ಅಪಘಾತಕ್ಕೆ ಒಳಗಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಬಂಟ್ವಾಳ ನಗರ ಠಾಣಾ ಪೊಲೀಸರು ಕಣ್ಣೀರು ಹಾಕಿದ ಅಪರೂಪದ ಘಟನೆ ನಡೆಯಿತು.

ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಸುಮಾರು 7 ವರ್ಷಕ್ಕಿಂತಲೂ ಹೆಚ್ಚಿನ ಅವಧಿಯಿಂದ ಸದಸ್ಯೆಯಾಗಿ ರಾತ್ರಿ ವೇಳೆ ಕಾವಲುಗಾರನಂತೆ ಶಿಸ್ತಿನ ಕೆಲಸ ಮಾಡುತ್ತಿದ್ದ ಹೆಣ್ಣು ನಾಯಿ ಕಾರು ಅಪಘಾತದಲ್ಲಿ ಶನಿವಾರ ರಾತ್ರಿ ಠಾಣೆಯ ಅವರಣದಲ್ಲಿಯೇ ಸಾವನ್ನಪ್ಪಿದೆ.

ಘಟನೆಯ ವಿವರ- ಕಾರಿನಲ್ಲಿ ಬಂದಿದ್ದ ವ್ಯಕ್ತಿಯೋರ್ವ ತನ್ನ ಕೆಲಸ ಮುಗಿಸಿ ಹಿಂತಿರುಗುವ ವೇಳೆ ಕಾರನ್ನು ರಿವರ್ಸ್ ತೆಗೆಯುವಾಗ ಅಲ್ಲೇ ಮಲಗಿದ್ದ ನಾಯಿಯ ಮೇಲೆ ಆತನಿಗೆ ಗೊತ್ತಿಲ್ಲದೇ ಕಾರು ಹರಿದಿದೆ. ಗಂಭೀರವಾಗಿ ಗಾಯಗೊಂಡ ನಾಯಿ ಸ್ಥಳದಲ್ಲಿಯೇ ಮೃತಪಟ್ಟಿದೆ. ಘಟನೆಯನ್ನು ಕಂಡ ನಗರ ಠಾಣಾ ಪೋಲೀಸರು ಕಣ್ಣೀರು ಹಾಕಿದ್ದು, ಬಳಿಕ ನಾಯಿಯನ್ನು ವಿಶೇಷ ಗೌರವ ನೀಡಿ, ಹೂವಿನ ಮಾಲೆಯೊಂದಿಗೆ ಅಂತ್ಯ ಸಂಸ್ಕಾರ ಮಾಡಿದರು. ಅನೇಕ ವರ್ಷಗಳಿಂದ ಈ ನಾಯಿ ಠಾಣೆಯ ಮೆಟ್ಟಿಲ ಮೇಲೆ ಮಲಗುತ್ತಿತ್ತು. ಠಾಣೆಯೇ ಇದರ ಮನೆಯಾಗಿತ್ತು. ಬಹಳ ಬುದ್ದಿಯ ನಾಯಿಯಾಗಿ ಎಲ್ಲರ ಅಚ್ಚುಮೆಚ್ಚಿನ ಬೊಗ್ಗಿ ಎಂದೇ ಪ್ರಸಿದ್ದಿಯಾಗಿತ್ತು.

Also Read  ನಾಳೆಯಿಂದ (ಎ.11) ಕಡಬ ತಾಲೂಕು ಪತ್ರಕರ್ತರ ಸಂಘದ ನೇತೃತ್ವದಲ್ಲಿ ಮೂರು ದಿನಗಳ ಉಚಿತ ಇಸಿಜಿ, ಮಧುಮೇಹ, ಹಿಮೋಗ್ಲೋಬಿನ್, ರಕ್ತದೊತ್ತಡ ತಪಾಸಣಾ ಶಿಬಿರ

error: Content is protected !!
Scroll to Top