ಉದ್ಯೋಗ ಹೆಸರಲ್ಲಿ 1.13 ಲಕ್ಷ ರೂ. ಹಣ ಪಡೆದು ವಂಚನೆ

(ನ್ಯೂಸ್ ಕಡಬ) newskadaba.com ಉಡುಪಿ, . 24. ಪಾರ್ಟ್ ಟೈಂ ಜಾಬ್ ನೀಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಸುಮಾರು 1,13,30 ರೂ. ವಂಚಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿಯ ಮಹಿಳೆಯೊರ್ವರ ಮೊಬೈಲ್ ಗೆ ಆಗಸ್ಟ್ 19 ರಂದು ಯಾರೋ ಅಪರಿಚಿತ ವ್ಯಕ್ತಿಗಳು 8874836643 ಸಂಖ್ಯೆಯ ಮೊಬೈಲ್ ನಂಬರ್ ನಿಂದ ವಾಟ್ಸ್‌ ಆಪ್‌ ಮೆಸೆಜ್‌ ಮಾಡಿ, ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ನಂಬಿಸಿ, ಬಳಿಕ Telegram ನಲ್ಲಿ ಲಿಂಕ್‌ನ್ನು ಕಳುಹಿಸಿ ಆಗಸ್ಟ್ 20 ರಿಂದ ಆಗಸ್ಟ್ 21 ರ ಮದ್ಯಾವಧಿಯಲ್ಲಿ ಒಟ್ಟು ರೂಪಾಯಿ 1,13,300 ಹಣವನ್ನು ಪಿರ್ಯಾದಿದಾರರಿಂದ ಆನ್ ಲೈನ್ ಮುಖಾಂತರ ಹಂತ ಹಂತವಾಗಿ ಪಡೆದು, ಉದ್ಯೋಗ ನೀಡದೇ, ಪಡೆದ ಹಣವನ್ನು ವಾಪಾಸು ನೀಡದೆ ಮೋಸ ಮಾಡಿರುವುದಾಗಿ ಉಡುಪಿ ಸೆನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಮಲ್ಪೆ ಬೀಚ್‌ನಲ್ಲಿ ಕರ್ತವ್ಯನಿರತ ಹೋಂ ಗಾರ್ಡ್ ಮೇಲೆ ಪ್ರವಾಸಿಗರ ಅನುಚಿತ ವರ್ತನೆ: ದೂರು ದಾಖಲು

error: Content is protected !!
Scroll to Top