ಕಡವೆ ಭೇಟೆ- ಕೋವಿ ಸಹಿತ ನಾಲ್ವರ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆ. 24. ಪಟ್ರಮೆ ಗ್ರಾಮದ ದಡಂತಮಲೆ ಮೀಸಲು ಅರಣ್ಯದ ಒಳಭಾಗದ ಬಟ್ಟಾಡಿ ಬಳಿಯ ಕಪಿಲಾ ನದಿ ತೀರದಲ್ಲಿ ಅಕ್ರಮವಾಗಿ ಕಡವೆ ಭೇಟೆಯಾಡಿದ ಮೂವರನ್ನು ಬಂದೂಕು ಸಹಿತ ಉಪ್ಪಿನಂಗಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ ಘಟನೆ ವರದಿಯಾಗಿದೆ.


ಡಿಆರ್.ಎಫ್‌ಒ ಸಿ.ಎನ್. ಲೋಕೇಶ್ ಅಶೋಕ್, ರಾವುತಪ್ಪ, ಅರಣ್ಯ ಪಾಲಕರಾದ ವಿನಯಚಂದ್ರ ಹಾಗೂ ಕಿಶೋರ್ ಗಸ್ತು ನಿರತರಾಗಿ ಖಚಿತ ಮಾಹಿತಿ ಮೇರೆಗೆ ಕಾದು ಕುಳಿತಿದ್ದರು. ಇದೇ ವೇಳೆ ಬೇಟೆಯಾಡಿದ ಶಬ್ದ ಕೇಳಿದ ಬೆನ್ನಲ್ಲೇ ಕಾಡಿನಲ್ಲಿ ಸುತ್ತುವರಿದು ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಕಡವೆಯನ್ನು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿ ಕೋವಿ ಸಹಿತ ಆರೋಪಿಗಳಾದ ಸುದೇಶ್ ಪಟ್ರಮೆ, ಪುನೀತ್, ಕೋಟ್ಯಪ್ಪ ಗೌಡ ಅವರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮತ್ತೋರ್ವ ಆರೋಪಿ ಲೋಕೇಶ್ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

Also Read  ದಕ್ಷಿಣ ಕನ್ನಡ | 243 ಹೊಸ ಕೋವಿಡ್‌ ಪ್ರಕರಣ ಪತ್ತೆ

error: Content is protected !!
Scroll to Top